IPL: ಡಕೌಟ್​ ಆಗಿದ್ದಕ್ಕೆ ರಾಜಸ್ಥಾನ ರಾಯಲ್ಸ್​ ಮಾಲೀಕರು ಕಪಾಳಕ್ಕೆ ಬಾರಿಸಿದ್ದರು – ರಾಸ್​ ಟೇಲರ್​ ಸ್ಫೋಟಕ ಮಾಹಿತಿ

Ross Taylor

ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟ್​ ಆಟಗಾರ ರಾಸ್​ ಟೇಲರ್​ (Ross Taylor) ಮೇಲೆ ಐಪಿಎಲ್ (IPL)​ ತಂಡ ರಾಜಸ್ಥಾನ ರಾಯಲ್ಸ್​ (Rajasthan Royals)ನ ಮಾಲೀಕರೊಬ್ಬರು ಕಪಾಳಕ್ಕೆ ಬಾರಿಸಿದ್ದರಂತೆ.

ಈ ಬಗ್ಗೆ ಸ್ವತಃ ರಾಸ್​ ಟೇಲರ್​ ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ.

ಮೊಹಾಲಿಯಲ್ಲಿ (Mohali) ಪಂಜಾಬ್​ ಕಿಂಗ್ಸ್​ ಇಲೆವೆನ್ (Kings XI Punjab) ವಿರುದ್ಧದ ಪಂದ್ಯದಲ್ಲಿ 195 ರನ್​ ಟಾರ್ಗೆಟ್​ ಚೇಸ್​ ಮಾಡುವ ವೇಳೆ ರಾಸ್​ ಟೇಲರ್​ ಎಲ್​ಬಿಡಬ್ಲ್ಯೂಗೆ (LBW) ಡಕೌಟ್​ ಆಗಿದ್ದರು.

ಪಂದ್ಯ ಮುಗಿದ ಬಳಿಕ ಹೋಟೆಲ್​ನ ಟಾಪ್​ ಫ್ಲೋರ್​ನಲ್ಲಿ ರಾಜಸ್ಥಾನ ತಂಡದ ಮಾಲೀಕರು ನನ್ನ ಕಪಾಳಕ್ಕೆ ಬಾರಿಸಿದರು.

ನೀನು ಡಕೌಟ್​ ಆಗುವುದಕ್ಕಲ್ಲ ನಾವು ನಿನಗೆ ಮಿಲಿಯನ್​ ಡಾಲರ್​ ಕೊಡುವುದು ಎಂದು ಹೇಳಿ ಕಪಾಳಕ್ಕೆ ಬಾರಿಸಿದರು.

ಕಪಾಳಕ್ಕೆ ಬಾರಿಸಿದ್ದು ನಾಟಕ ಎಂದು ನನಗೆ ಅನಿಸಿಲ್ಲ. ಈ ವೇಳೆ ಲಿಜ್​ ಹರ್ಲಿ ಮತ್ತು ವಾರ್ನಿ ಕೂಡಾ ಇದ್ದರು ಎಂದು ರಾಸ್​ ಟೇಲರ್​ ಹೇಳಿದ್ದಾರೆ.

2008ರಿಂದ 2010ರವರೆಗೆ ಆರ್​ಸಿಬಿಯಲ್ಲಿ ಆಡಿದ್ದ ರಾಸ್​ ಟೇಲರ್​ 2011ರಲ್ಲಿ ಆರ್​ಆರ್​ ಸೇರಿಕೊಂಡಿದ್ದರು.

LEAVE A REPLY

Please enter your comment!
Please enter your name here