ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಬಿದ್ದ ರೋಹಿತ್ ಶರ್ಮಾ – ಹೊಸಬರಿಗೆ ಮಣೆ

ದಕ್ಷಿಣ ಆಫ್ರಿಕಾ ಸರಣಿಯಿಂದ ರೋಹಿತ್ ಶರ್ಮಾ ಹೊರಬಿದ್ದಿದ್ದಾರೆ.

ರೋಹಿತ್ ಬದಲು ಇಂಡಿಯಾ ಎ ತಂಡದ ಆಟಗಾರ ಪ್ರಿಯಾಂಕ್ ಪಾಂಚಲ್‌ಗೆ ಸ್ಥಾನ ನೀಡಲಾಗಿದೆ.

ಮುಂಬೈನಲ್ಲಿ ನಿನ್ನೆ ಅಭ್ಯಾಸದ ವೇಳೆ ಸ್ನಾಯುನೋವಿಗೆ ಒಳಗಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಪ್ರಿಯಾಂಕ್ ಪಾಂಚಾಲ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

ಡಿಸೆಂಬರ್ 26ರಿಂದ ಟೆಸ್ಟ್ ಸರಣಿ ಆರಂಭ ಆಗಲಿದೆ. ಟೆಸ್ಟ್ ಜೊತೆಗೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ಆಡಲಿದೆ.

ಈ ವರ್ಷ ಆರಂಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಇಂಡಿಯಾ ಎ ತಂಡ ಕೈಗೊಂಡಿದ್ದ ಪ್ರವಾಸದಲ್ಲಿ ಪ್ರಿಯಾಂಕ್ ಪಾಂಚಾಲ್ ಆಡಿದ್ದರು.

32 ವರ್ಷದ ಗುಜರಾತ್ ಮೂಲದ ಪಾಂಚಾಲ್ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 96 ರನ್ ಸಿಡಿಸಿದ್ದರು.

LEAVE A REPLY

Please enter your comment!
Please enter your name here