Richest Beggar: ಈತ ಭಾರತದ ಶ್ರೀಮಂತ ಭಿಕ್ಷುಕ

ಈತ ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ (Richest Beggar). ಈತನ ಬಳಿಕ ಏಳೂವರೆ ಕೋಟಿ ರೂಪಾಯಿಯಷ್ಟು ಮೊತ್ತದ ಸಂಪತ್ತಿದೆ. ಪ್ರತಿ ತಿಂಗಳಿಗೆ ಭಿಕ್ಷಾಟನೆಯಿಂದ ಈತನ ಆದಾಯ 60 ಸಾವಿರದಿಂದ 75 ಸಾವಿರ ರೂಪಾಯಿ.

ಮಹಾನಗರಿ ಮುಂಬೈನಲ್ಲಿ (Mumbai) ಈತನ ಹೆಸರಲ್ಲಿ  1.2 ಕೋಟಿ ರೂಪಾಯಿ ಮೊತ್ತದ 2 ಬೆಡ್​ರೂಂಗಳ ಫ್ಲ್ಯಾಟ್​ (2 BHK Flat) ಇದೆ. ಥಾಣೆಯಲ್ಲಿ (Thane) ಎರಡು ಅಂಗಡಿಗಳನ್ನು ಬಾಡಿಗೆ ಕೊಟ್ಟಿದ್ದಾನೆ. ಅವುಗಳಿಂದ ಪ್ರತಿ ತಿಂಗಳು ಬರುವ ಬಾಡಿಗೆ 60 ಸಾವಿರ ರೂಪಾಯಿ.

ಅಂದಹಾಗೆ ಆ ಭಿಕ್ಷುಕನ ಹೆಸರು ಭರತ್​ ಜೈನ್ (Bharat Jain)​. ಈತ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್​ ರೈಲ್ವೆ ನಿಲ್ದಾಣ (Chatrapati Shivaji Maharaja Terminus Railway Sation) ಅಥವಾ ಆಜಾದ್​ ಮೈದಾನದ (Azad Maidan) ಬಳಿ ಭಿಕ್ಷೆ ಬೇಡುತ್ತಾನೆ.

ಈತನೊಂದಿಗೆ ಮಡದಿ, ಇಬ್ಬರು ಗಂಡು ಮಕ್ಕಳು, ಒಬ್ಬ ಸಹೋದರ ಮತ್ತು ತಂದೆ ಇದ್ದಾರೆ.

ಇಷ್ಟು ಶ್ರೀಮಂತನಾಗಿದ್ದರೂ ಈಗಲೂ ಈತ ಭಿಕ್ಷೆ ಬೇಡುತ್ತಾನೆ. ಪ್ರತಿ ದಿನ ಭಿಕ್ಷಾಟನೆಯಿಂದ ಈತನ ಕಮಾಯಿ 2 ,000 ರೂ.ಗಳಿಂದ 2,500 ರೂಪಾಯಿ.

ಪರೆಲ್​ನಲ್ಲಿ 1 ಬೆಡ್​ ರೂಂನ ಡೂಪ್ಲೆಕ್ಸ್​ ಅಪಾರ್ಟ್​ಮೆಂಟ್​ನಲ್ಲಿ ಈತನ ಕುಟುಂಬ ವಾಸಿಸುತ್ತಿದೆ. ಈತನ ಮಕ್ಕಳು ಕಾನ್ವೆಂಟ್​ ಶಾಲೆಗಳಲ್ಲಿ ಓದಿ ಶಿಕ್ಷಣ (Education) ಮುಗಿಸಿದ್ದಾರೆ. ಈತನ ಕುಟುಂದವರು ದಿನಸಿ ಅಂಗಡಿಯನ್ನು ನಡೆಸುತ್ತಾರೆ.

ಇಷ್ಟು ಶ್ರೀಮಂತ ಆದ ಬಳಕಿವೂ ಈತ ಭಿಕ್ಷಾಟನೆ ನಿಲ್ಲಿಸಿಲ್ಲ, ಭಿಕ್ಷೆ ಬೇಡುವುದು ಬೇಡ ಎಂಬ ಮನೆಯವರ ಮಾತನ್ನೂ ಕೇಳಲ್ವಂತೆ ಈ ಧನಿಕ ಭಿಕ್ಷುಕ.

LEAVE A REPLY

Please enter your comment!
Please enter your name here