ರೀಲ್ಸ್ ಗೀಳಿಗೆ ಒಳಗಾಗಿದ್ದ ಪತ್ನಿಯನ್ನೇ ಗಂಡ ಕೊಲೆ ಮಾಡಿದ್ದಾನೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮ 26 ವರ್ಷದ ಪೂಜಾ ಕೊಲೆಯಾಗಿದ್ದಾಳೆ.
33 ವರ್ಷದ ಈಕೆಯ ಗಂಡ ಶ್ರೀನಾಥ್ ವೇಲ್ನಿಂದ ಪತ್ನಿ ಪೂಜಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಇವರಿಬ್ಬರು 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರಿಗೂ ಹೆಣ್ಣು ಮಗುವಿದೆ.
ಅಳಿಯನ ಕೃತ್ಯಕ್ಕೆ ಮಾವನ ನೆರವು:
ಕೊಲೆ ಆದ ಮಗಳ ಶವ ಸಾಗಿಸಲು ಅಳಿಯ ಶ್ರೀನಾಥ್ಗೆ ಮಾವ ಶೇಖರ್ ಸಹಾಯ ಮಾಡಿದ್ದ. ಇಬ್ಬರೂ ಸೇರಿ ಬೈಕ್ನಲ್ಲಿ ಶವ ಸಾಗಿಸಿ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದಿದ್ದರು.
ಬಳಿಕ ನಿಮಿಷಾಂಭ ದೇವರ ದರ್ಶನ ಪಡೆದು ಪತ್ನಿಯನ್ನು ಕೊಲೆ ಮಾಡಿದ್ದರ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದ.
ಶ್ರೀನಾಥ್ ಮತ್ತು ಶೇಖರ್ ಇಬ್ಬರನ್ನೂ ಅರಕೆರೆ ಪೊಲೀಸರು ಬಂಧಿಸಿದ್ದಾರೆ.
ADVERTISEMENT
ADVERTISEMENT