Times Nowಗೆ ಪ್ರಧಾನ ಸಂಪಾದಕ ರಾಹುಲ್​ ಶಿವಶಂಕರ್​​ ವಿದಾಯ

ಇಂಗ್ಲೀಷ್​ ಸುದ್ದಿವಾಹಿನಿ ಟೈಮ್ಸ್​ ನೌ ಪ್ರಧಾನ ಸಂಪಾದಕ ರಾಹುಲ್​ ಶಿವಶಂಕರ್​​ ಅವರು ಟೈಮ್ಸ್ ನೌ ಚಾನೆಲ್​​ಗೆ ವಿದಾಯ ಹೇಳಿದ್ದಾರೆ.

ತಮ್ಮ ಟ್ವಿಟ್ಟರ್​ ಬಯೋದಲ್ಲೂ ಕೂಡಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನ ಸಂಪಾದಕ, ಟೈಮ್ಸ್​ ನೌ 2016ರಿಂದ 2023ರವರೆಗೆ ಎಂದು ಬರೆದುಕೊಂಡಿದ್ದಾರೆ.

ರಾಹುಲ್​ ಶಿವಶಂಕರ್​ ಅವರು ಟೈಮ್ಸ್​ ನೌಗೆ ವಿದಾಯ ಹೇಳಿರುವ ಬಗ್ಗೆ ನ್ಯೂಸ್​ಲಾಂಡ್ರಿ ವೆಬ್​ಸೈಟ್​ ವರದಿ ಮಾಡಿದೆ.

2016ರವರೆಗೆ ನ್ಯೂಸ್​ ಎಕ್ಸ್​ ಪ್ರಧಾನ ಸಂಪಾದಕರಾಗಿದ್ದ ರಾಹುಲ್​ ಶಿವಶಂಕರ್​​ ಅವರು ಬಳಿಕ ಟೈಮ್ಸ್​​ ನೌ ಸೇರಿಕೊಂಡರು.

ಟೈಮ್ಸ್​ ನೌನಲ್ಲಿ ನ್ಯೂಸ್​ ಅವರ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ರಾಹುಲ್​ ಶಿವಶಂಕರ್​​ ರಾಜೀನಾಮೆ ಕಾರಣದಿಂದ ಗ್ರೂಪ್​ ಎಡಿಟರ್​ ನಾವಿಕ ಕುಮಾರ್​ ಅವರಿಗೆ ಚಾನೆಲ್​ನ ಸಂಪೂರ್ಣ ಹೊಣೆಗಾರಿಕೆ ನೀಡಲಾಗಿದೆ.