ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಿರುತೆರೆ ಕಲಾವಿದ ಮಂಡ್ಯ ರವಿ (Mandya Ravi) ಇಂದು ನಿಧನರಾಗಿದ್ದಾರೆ.
ಮಂಡ್ಯ ಮೂಲದ ರವಿ ಪ್ರಸಾದ್ (Mandya Ravi) ಅವರು ಮಗಳು ಜಾನಕಿ ಧಾರಾವಾಹಿಯ ಮೂಲಕ ಚಂದ್ರು ಭಾರ್ಗಿಯಾಗಿ ಖ್ಯಾತಿ ಗಳಿಸಿದ್ದರು.
43 ವರ್ಷದ ನಟ ರವಿ ಜಾಂಡೀಸ್ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇಂದು ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಐಸಿಯುನಲ್ಲಿ ದಾಖಲಿಸಿ ಚಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ಎಂಎ, ಎಲ್ಎಲ್ಬಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಇವರು ರಂಗಭೂಮಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಿರ್ದೇಶಕ ಟಿಎನ್ ಸೀತಾರಾಮನ್ ಅವರ ಗರಡಿಯಲ್ಲಿ ಪಳಗಿದ ನಟ ಇವರು.
ನಟ ರವಿ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಚಿತ್ರಲೇಖ, ಮಿಂಚು, ಮುಕ್ತ ಮುಕ್ತ, ವರಮಹಾಲಕ್ಷ್ಮೀ ಸ್ಟೋರ್ಸ್, ಮಗಳು ಜಾನಕಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂಫೈಲ್ ಎನ್ನುವ ಕಾರ್ಯಕ್ರಮವನ್ನೂ ಇವರು ನಿರೂಪಣೆ ಮಾಡುತ್ತಿದ್ದರು.
ಇವರ ನಿಧನಕ್ಕೆ ನಿರ್ದೇಶಕ ಟಿಎನ್ ಸೀತಾರಾಮನ್ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ : ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮಾ ಹರೀಶ್ ತಾಯಿ ನಿಧನ