ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇನ್ಮುಂದೆ ಪಡಿತರ ಅಕ್ಕಿಯಲ್ಲಿ ಕುಚ್ಚಲಕ್ಕಿ ವಿತರಣೆ ಆಗಲಿದೆ. ಕುಚ್ಚಲಕ್ಕಿಯನ್ನು ಪಡಿತರ ಅಕ್ಕಿಯ ರೂಪದಲ್ಲೇ ವಿತರಣೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಒಪ್ಪಿಕೊಂಡಿದೆ.
ಈ ಬಗ್ಗೆ ಮಂಗಳೂರು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟ್ವೀಟಿಸಿದ್ದಾರೆ.
ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಬೆಳ್ತಿಗೆ ಅಕ್ಕಿಯ ಬದಲು ಉತ್ತಮ ಗುಣಮಟ್ಟದ ಸ್ಥಳೀಯವಾಗಿ ಖರೀದಿ ಮಾಡಿದ ಕುಚ್ಚಲಕ್ಕಿಯನ್ನು ವಿತರಿಸಬೇಕೆಂದು ಮುಖ್ಯಮಂತ್ರಿಗಳಾದ @BSBommai ಅವರಲ್ಲಿ ಮನವಿ ಮಾಡಿದೆನು. ಮಾನ್ಯ ಮುಖ್ಯಮಂತ್ರಿಗಳು ಬೇಡಿಕೆಗೆ ಸ್ಪಂದಿಸಿ ಕುಚ್ಚಲಕ್ಕಿ ವಿತರಣೆಗೆ ಆದೇಶ ಹೊರಡಿಸಲು ಕ್ರಮ ಕೈಗೊಂಡಿರುತ್ತಾರೆ
ಎಂದು ಕಟೀಲ್ ಟ್ವೀಟಿಸಿದ್ದಾರೆ.
ಮನವಿ ಕೊಡುವ ವೇಳೆ ಸಂಸದ ಕಟೀಲ್ ಜೊತೆಗೆ ಉಡುಪಿ ಉಸ್ತುವಾರಿ ಕೋಟಾ ಶ್ರೀನಿವಾಸಪೂಜಾರಿ ಕೂಡಾ ಇದ್ದರು.