Ration Card: ಪಡಿತರ ಚೀಟಿ ತಿದ್ದುಪಡಿ, ಹೊಸ ಹೆಸರು ಸೇರ್ಪಡೆಗೆ ಅನುಮತಿ

ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನುಮತಿ ನೀಡಿದೆ.

ಈಗಿರುವ ಪಡಿತರ ಚೀಟಿಯಲ್ಲಿ ಹೊಸ ಫಲಾನುಭವಿಗಳನ್ನು (ಹೊಸದಾಗಿ ಕುಟುಂಬ ಸದಸ್ಯರ ಹೆಸರನ್ನು) ಸೇರ್ಪಡೆ ಮಾಡುವುದಕ್ಕೆ ಮತ್ತು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅನುಮತಿ ನೀಡಲಾಗಿದೆ.

ಆದರೆ ಮುಂದಿನ ಆದೇಶದವರೆಗೆ ಹೊಸ ಪಡಿತರ ಚೀಟಿಯನ್ನು ವಿತರಣೆ ಮಾಡದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಅವರು ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಈ ಮೂಲಕ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಆದರೆ ಹೊಸ ಪಡಿತರ ಚೀಟಿಯನ್ನು ಪಡೆಯಲು ಅವಕಾಶ ಇಲ್ಲ.

LEAVE A REPLY

Please enter your comment!
Please enter your name here