ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ – ರಾಷ್ಟ್ರೀಯ ಲೋಕದಳ ಮೈತ್ರಿ – ಪರಿಣಾಮ ಏನು..?

ಉತ್ತರಪ್ರದೇಶದಲ್ಲಿ ಇನ್ನೂ ವಿಧಾನಸಭಾ ಚುನಾವಣೆ ಘೋಷಣೆ ಬಾಕಿ ಇರುವಂತೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿವೆ. ಇವತ್ತು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರನ್ನು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಅವರು ಭೇಟಿ ಮಾತುಕತೆ ನಡೆಸಿದರು. ಆ ಬಳಿಕ ಪ್ರತಿಕ್ರಿಯೆ ನೀಡಿದ ಚೌಧರಿ ಶೀಘ್ರವೇ ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ಹೇಳಿದರು.

`ಶ್ರೀ ಜಯಂತ್ ಚೌಧರಿ ಅವರ ಜೊತೆಗೆ ಬದಲಾವಣೆ ಕಡೆಗೆ’ ಎಂದು ಅಖಿಲೇಶ್ ಟ್ವೀಟಿಸಿದರೆ, `ಜೊತೆಯಾಗಿ ಹೋಗೋಣ’ ಎಂದು ಜಯಂತ್ ಚೌಧರಿ ಟ್ವೀಟಿಸಿದ್ದಾರೆ.

ಮೂಲಗಳ ಪ್ರಕಾರ ಆರ್ ಎಲ್ ಡಿಗೆ ಸಮಾಜವಾದಿ ಪಾರ್ಟಿ 30ರಿಂದ 50 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.

ಸಮಾಜವಾದಿ-ಆರ್ ಎಲ್ ಡಿ ಮೈತ್ರಿ ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರಭಾವ ಬೀರುವ ನಿರೀಕ್ಷೆ ಇದೆ. 403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳು ಈ ವ್ಯಾಪ್ತಿಯಲ್ಲೇ ಬರುತ್ತವೆ. 2017ರ ಚುನಾವಣೆಯಲ್ಲಿ ಈ 100 ಕ್ಷೇತ್ರಗಳ ಪೈಕಿ ಬಿಜೆಪಿ 76 ಕ್ಷೇತ್ರಗಳನ್ನು ಗೆದ್ದಿತ್ತು.

ಎಸ್‌ಪಿ-ಆರ್ ಎಲ್ ಡಿ ಮೈತ್ರಿಯಿಂದ ಜಾಟ್ ಮತ್ತು ಮುಸ್ಲಿಂ ಮತಗಳ ಕ್ರೋಢೀಕರಣ ಆಗಲಿದೆ ಎಂದು ಭಾವಿಸಲಾಗಿದೆ.

LEAVE A REPLY

Please enter your comment!
Please enter your name here