‌ಅತ್ಯಾಚಾರಿಗಳಿಗೆ ಎಂತಹ ಶಿಕ್ಷೆ ಕೊಟ್ಟರೆ ಒಳ್ಳೆದು..! – ಮಹಿಳಾ ಸಂಸದೆಯ ಆಕ್ರೋಶದ ನುಡಿ

ಅತ್ಯಾಚಾರಿಗಳನ್ನು ಜನರ ಎದುರು ತಂದು ಹೊಡೆದು ಸಾಯಿಸಬೇಕು. ಇದು ಬಿಗ್‌ಬಿ ಅಮಿತಾಭ್‌ ಬಚ್ಚನ್‌ ಪತ್ನಿ ಮತ್ತು ರಾಜ್ಯಸಭೆ ಸಂಸದೆಯೂ ಆಗಿರುವ ಜಯಾ ಬಚ್ಚನ್‌ ಆಕ್ರೋಶದ ಹೊರಹಾಕಿದ ಪರಿ.

ಹೈದ್ರಾಬಾದ್‌ನಲ್ಲಿ ಘಟಿಸಿದ್ದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಘನಘೋರ ಕಗ್ಗೊಲೆ ಹಿನ್ನೆಲೆಯಲ್ಲಿ ಇವತ್ತು ಸಂಸತ್ತಿನ ಮೇಲ್ಮನೆಯಲ್ಲಿ ಚರ್ಚೆ ನಡೆಯಿತು.

ಇಂತಹ ಕೃತ್ಯಗಳ ಘಟಿಸಿದ ಬಳಿಕ ನಾನು ಎಷ್ಟು ಸಾರಿ ಎದ್ದು ಮಾತಾಡಿದೆ ಎಂದು ನನಗೇ ಗೊತ್ತಿಲ್ಲ. ಅದು ನಿರ್ಭಯ ಆಗಿರಬಹುದು ಅಥವಾ ಕಥ್ವಾ ಆಗಿರಬಹುದು ಅಥವಾ ತೆಲಂಗಾಣದಲ್ಲಿ ಏನಾಗಿದೆಯೋ ಅದರ ಬಗ್ಗೆ.. ನನ್ನ ಪ್ರಕಾರ ಸರ್ಕಾರ ತಕ್ಕ ಮತ್ತು ಸ್ಪಷ್ಟ ಉತ್ತರ ಕೊಡುವುದಕ್ಕೆ ಇದು ಸಕಾಲ.

ಸರ್ಕಾರ ಏನು ಮಾಡಿದೆ..? ಪೀಡಿತರಿಗೆ ಹೇಗೆ ನ್ಯಾಯ ಸಿಕ್ಕಿದೆ..? ನಾನು ಯಾರ ಹೆಸರನ್ನೂ ಹೇಳುತ್ತಿಲ್ಲ. ಆದರೆ ಭದ್ರತೆಯನ್ನೇ ಕಾರಣ ಎಂದು ಯಾಕೆ ಹೇಳಬಾರದು..? ಇಂತಹ ಕೃತ್ಯಗಳಿಂದ ಮಹಿಳೆಯರು ಮತ್ತು ಮಕ್ಕಳನ್ನು ಕಾಪಾಡಲಾಗದವರನ್ನು ಬಹಿರಂಗವಾಗಿ ನಿಂದಿಸಬೇಕು

ಎಂದು ರಾಜ್ಯಸಭೆಯಲ್ಲಿ ಜಯಾ ಬಚ್ಚನ್‌ ಗುಡುಗಿದರು.

LEAVE A REPLY

Please enter your comment!
Please enter your name here