ನಟ ರಣ್ ವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ (Ranveer Singh Naked Photoshoot) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.
ನಟ ರಣ್ ವೀರ್ ಸಿಂಗ್ ಅವರು ಮ್ಯಾಗ್ಜಿನ್ಗಾಗಿ ಬೆತ್ತಲೆ ಫೋಟೋಶೂಟ್(Ranveer Singh Naked Photoshoot) ಮಾಡಿಸಿದ್ದರು. ಅಲ್ಲದೇ, ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಇವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ : ರಣ್ ವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ : ದೂರು ದಾಖಲು
ಅನಂತರ ಇವರ ಮೇಲೆ ಬೆತ್ತಲೆ ಫೋಟೋಶೂಟ್ಗೆ ಸಂಬಂಧಿಸಿದಂತೆ ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ದೂರು ಸಲ್ಲಿಸಲಾಗಿತ್ತು. ಇದೀಗ, ಆ ದೂರಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಣವೀರ್ ಸಿಂಗ್ ಅವರ ವಿಚಾರಣೆಗಾಗಿ ನೋಟಿಸ್ ಜಾರಿ ಮಾಡಿದ್ದಾರೆ.
ಮುಂಬೈ ಮೂಲದ ಎನ್ಜಿಓ(NGO) ನಟ ರಣ್ವೀರ್ ತಮ್ಮ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮಹಿಳೆಯರ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ನೀಡಿತ್ತು.
ಇದೇ ಅಗಸ್ಟ್ 22 ರಂದು ಠಾಣೆಗೆ ಹಾಜರಾಗುವಂತೆ ನೋಟಿಎಸ್ನಲ್ಲಿ ತಿಳಿಸಲಾಗಿದೆ.
(ನಟ ಗಣೇಶ್, ದಿಗಂತ್, ಪವನ್ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)