ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುತ್ತಾ ಮಹಿಳೆಯರ ಬಗ್ಗೆ ಹಗುರವಾದ ಮಾತನ್ನು ಬಳಸಿದ್ದರು. ಇಂದು ತಮ್ಮ ಆ ಮಾತಿಗೆ ಕ್ಷಮೆಯಾಚಿಸಿದ್ದಾರೆ.
ಗುರುವಾರ ಸುವರ್ಣಸೌಧದ ಅಧಿವೇಶನದಲ್ಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿಯವರಿಗೆ ಶಾಸಕರು ಅತೀವೃಷ್ಠಿಯ ಬಗ್ಗೆ ಚರ್ಚೆಸಲು ಹೆಚ್ಚಿನ ಸಮಯ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ಸ್ಪೀಕರ್ ಕಾಗೇರಿವರು ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್ದ ಸಿಚುಯೇಷನ್ ಎನ್ನುವ ರೀತಿ ಆಗಿದೆ ರಮೇಶ್ ಕುಮಾರ್ ಅವರೇ’ ಎಂದು ಹೇಳಿದ್ದಾರೆ.
ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಎದ್ದುನಿಂತು ಪ್ರತಿಕ್ರಿಯಿಸಿದ ಮಾಜಿ ಸ್ಪೀಕರ್ ರಮೇಶ್ಕುಮಾರ್,“Actually there is a saying, when rape is inevitable laydown and enjoy it. That’s the exactly the position in to which you are” (ಹೀಗೊಂದು ಮಾತಿದೆ…ಅತ್ಯಾಚಾರ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಬೇಕು, ಅಂಥ ಸ್ಥಿತಿ ಈಗ ಇಲ್ಲೂ ಇದೆ) ಎಂದರು. ಈ ಪ್ರತಿಕ್ರಿಯೆಗೆ ಸ್ಪೀಕರ್ ಕಾಗೇರಿ ನಕ್ಕು ಸುಮ್ಮನಾಗಿದ್ದಾರೆ.
ಮಾಜಿ ಸ್ಪೀಕರ ರಮೇಶ್ ಕುಮಾರ್ ಹಾಗೂ ಸ್ಪೀಕರ್ ಕಾಗೇರಿಯವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಕುಮಾರ್ ಅವರು ಸಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ.
” ನಾನು ಗುರವಾರ ಅಧಿವೇಶದನಲ್ಲಿ ಅತ್ಯಾಚಾರದ ಕುರಿತಾಗಿ ನಿರ್ಲಕ್ಷ್ಯವಾಗಿ ಮಾತನಾಡಿದ್ದಕ್ಕೆ ಪ್ರಾಮಾಣಿಕವಾಗಿ ತಮ್ಮೆಲ್ಲರ ಕ್ಷಮೆ ಕೋರುತ್ತೇನೆ. ನನ್ನ ಉದ್ದೇಶ ಅತ್ಯಾಚಾರದಂತ ಘೋರ ಕೃತ್ಯವನ್ನು ಹಗುರಗೊಳಿಸುವುದಾಗಿರಲಿಲ್ಲ. ಇನ್ನು ಮುಂದೆ ವಿಧಾಸಭೆಯಲ್ಲಿ ಮಾತನಾಡುವಾಗ ಎಚ್ಚರಕೆಯಿಂದ ಪದಗಳನ್ನು ಆರಿಸಿ ಮಾತನಾಡುತ್ತೇನೆ” ಎಂದು ರಮೇಶ್ ಕುಮಾರ್ ಅವರು ಬರೆದುಕೊಂಡಿದ್ದಾರೆ.