Actor AkshayKumar: ರಕ್ಷಾ ಬಂಧನ ಸಿನಿಮಾ ಫ್ಲಾಪ್​ – ಎರಡೇ ದಿನಕ್ಕೆ ಶೋಗಳೆಲ್ಲ ರದ್ದು

ಹಿಂದಿ ನಟ ಅಕ್ಷಯ್​ ಕುಮಾರ್​ (Actor Akshay Kumar) ಅಭಿನಯದ ಹಿಂದಿ ಸಿನಿಮಾ ರಕ್ಷಾ ಬಂಧನ್ (Raksha Bandhan)
​ ಚಿತ್ರದ ಪ್ರದರ್ಶನವನ್ನು ಚಿತ್ರ ಬಿಡುಗಡೆ ಆದ ಎರಡನೇ ದಿನದಲ್ಲಿ ರದ್ದುಪಡಿಸಲಾಗಿದೆ.
ಬಿಡುಗಡೆ ಆದ ಎರಡನೇ ದಿನವೂ ಪ್ರೇಕ್ಷಕರ ಸಂಖ್ಯೆ ಶೇಕಡಾ 30ರಷ್ಟು ಕಡಿಮೆ ಆದ ಹಿನ್ನೆಲೆಯಲ್ಲಿ ಥಿಯೇಟರ್​ಗಳು ಖಾಲಿ ಹೊಡೆದ ಹಿನ್ನೆಲೆಯಲ್ಲಿ ಪ್ರದರ್ಶನ ರದ್ದುಗೊಳಿಸಲಾಗಿದೆ.
ಈ ಮೂಲಕ ಅಕ್ಷಯ್​​ ಕುಮಾರ್​ ನಟನೆಯ ಎರಡನೇ ಸಿನಿಮಾವೂ ಸತತ ಹೀನಾಯ ಸೋಲು ಕಂಡಿದೆ.
ರಕ್ಷಾ ಬಂಧನ ಸಿನಿಮಾದ ಎರಡನೇ ದಿನದ ಗಳಿಕೆ ಕೇವಲ 6 ಕೋಟಿ ರೂಪಾಯಿಯಷ್ಟೇ. ಬಿಡುಗಡೆ ಆದ ಮೊದಲ ದಿನ ಕೇವಲ 8.6 ಕೋಟಿ ರೂಪಾಯಿ ಗಳಿಸಿತ್ತು.
ಆ ಮೂಲಕ ಕೇವಲ 14 ಕೋಟಿ ರೂಪಾಯಿ ಗಳಿಸಿ ಸಿನಿಮಾ ಫ್ಲಾಪ್ (Flop)​​ ಆಯಿತು.
ರಕ್ಷಾ ಬಂಧನ್​ ಸಿನಿಮಾದ 1 ಸಾವಿರ ಶೋಗಳನ್ನು (cinema shows) ರದ್ದುಪಡಿಸಲಾಗಿದೆ.
ಸಿನಿಮಾವನ್ನು ಆನಂದ್​​ ಲಾಲ್​ ರಾಯ್​ (Anand Lal Rai) ನಿರ್ದೇಶಿಸಿದ್ದು ರಕ್ಷಾ ಬಂಧನ ದಿನದಂದು ಬಿಡುಗಡೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here