ವಿದ್ಯುತ್ ತಂತಿ ತಗುಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ದಂಪತಿ ಸಾವು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಯಲಾಟ ಕಲಾವಿದ ಸಾರಥಿ ಪಂಪಾಪತಿ (68) ಮತ್ತು ಅವರ ಪತ್ನಿ ದ್ಯಾಮವ್ವ ಅವರು (66) ವಿದ್ಯುತ್‌ ಸ್ಪರ್ಷದಿಂದ ಭಾನುವಾರ ಸಂಜೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಳ್ಳಾರಿಯ ಕೌಲ್‌ ಬಜಾರ್‌ನ ಬಂಡಿಹಟ್ಟಿಯ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪತ್ನಿಗೆ ವಿದ್ಯುತ್‌ ಶಾಕ್‌ ಹೊಡೆದಾಗ ಜೀವ ಉಳಿಸಲು ಹೋಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ಅವರೂ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ನಗರದ ಬಂಡಿಹಟ್ಟಿಯಲ್ಲಿರುವ ತಮ್ಮ ಮನೆಯ ಛಾವಣಿ ಮೇಲೆ ನಿಂತಿದ್ದ ಮಳೆ ನೀರನ್ನು ಹೊರ ಹಾಕಲು ಸಂಜೆ 4:30ರ ಸುಮಾರಿಗೆ ಹೋಗಿದ್ದ ವೇಳೆ ಈ ದರ್ಘಟನೆ ಸಂಭವಿಸಿದೆ. ಪತ್ನಿಗೆ ವಿದ್ಯುತ್‌ ಕಂಬದಿಂದ ಬಂದಿದ್ದ ಸರ್ವಿಸ್‌ ವೈರ್‌ ಸ್ಪರ್ಷವಾಗಿ ವಿದ್ಯುತ್‌ ಪ್ರವಹಿಸಿದೆ. ಅವರನ್ನು ರಕ್ಷಿಸಲು ಹೋದ ಪಂಪಾಪತಿ ಅವರಿಗೂ ಶಾಕ್‌ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ :ಮಂಜೇಶ್ವರ: ಮನೆ ಟೆರೇಸ್‍ನಲ್ಲಿ ಆಟವಾಡುತಿದ್ದ ಬಾಲಕ ವಿದ್ಯುತ್ ಶಾಕ್ ತಗಲಿ ಮೃತ್ಯು

ಮೃತ ದಂಪತಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಳ್ಳಾರಿ, ಪಂಪಾಪತಿ ಎರಡು ಸಾವಿರಕ್ಕೂ ಹೆಚ್ಚು ಬಯಲಾಟ ಪ್ರದರ್ಶನ ನೀಡಿದ್ದಾರೆ. ಸಾರಥಿ ಪಾತ್ರದಿಂದ ಅವರು ಚಿರಪರಿಚಿತರಾಗಿದ್ದರು. 2018ರಲ್ಲಿ ರಾಜ್ಯ ಸರ್ಕಾರವು ಪಂಪಾಪತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

LEAVE A REPLY

Please enter your comment!
Please enter your name here