ಕರ್ನಾಟಕ ವಿದಾನಸಭೆಯಿಂದ ರಾಜ್ಯಸಭೆ ಚುನಾವಣೆ ಮುಕ್ತಾಯವಾಗಿದೆ. ಇಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ ಮೊದಲ ಅಭ್ಯರ್ಥಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2 ನೇ ಅಭ್ಯರ್ಥಿ ಜಗ್ಗೇಶ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಮೊದಲ ಅಭ್ಯರ್ಥಿ ಜೈರಾಂ ರಮೇಶ್ ಗೆಲುವು ಸಾಧಿಸಿದ್ದಾರೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಇದೆ.
ಇನ್ನು, 4 ನೇ ಸ್ಥಾನಕ್ಕೆ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಇದುವರೆಗೂ ತುಂಬಾ ಕುತೂಹಲ ಇತ್ತು. ಆದರೆ, ಇಂದು ವಿಧಾನಸಭೆಯಲ್ಲಿ ಚುನಾವಣೆ ನಡದು ಮುಕ್ತಾಯವಾಗಿದ್ದು, ಒಂದು ಸ್ಪಷ್ಟ ಚಿತ್ರಣ ದೊರಕಿದೆ. ಬಿಜೆಪಿಯ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಅವರೇ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ರಿಗೆ ಮೊದಲ ಪ್ರಾಶಸ್ತ್ಯದ 46 ಮತಗಳು ಚಲಾವಣೆಯಾಗಿವೆ. ನಟ ಜಗ್ಗೇಶ್ಗೆ ಮೊದಲ ಪ್ರಾಶಸ್ತ್ಯದ 40 ಮತ ಹಾಗೂ 2ನೇ ಪ್ರಾಶಸ್ತ್ಯದ 30 ಮತಗಳು ಚಲಾವಣೆಯಾಗುವೆ. ಆ ಮೂಲಕ ಇಬ್ಬರೂ ಗೆಲುವು ಸಾಧಿಸಿದಂತಾಗಿದೆ. 3ನೇ ಅಭ್ಯರ್ಥಿ ಲೆಹರ್ಸಿಂಗ್ಗೆ ಮೊದಲ ಪ್ರಾಶಸ್ತ್ಯದ 30 ಮತಗಳು, 2ನೇ ಪ್ರಾಶಸ್ತ್ಯದ 60 ಮತಗಳು ಚಲಾವಣೆಯಾಗಿವೆ.
ಕಾಂಗ್ರೆಸ್ನ ಮೊದಲ ಅಭ್ಯರ್ಥಿ ಜೈರಾಂ ರಮೇಶ್ಗೆ ಮೊದಲ ಪ್ರಾಶಸ್ತ್ಯದ 45 ಮತಗಳು, 2ನೇ ಅಭ್ಯರ್ಥಿ ಮನ್ಸೂರ್ ಖಾನ್ಗೆ ಮೊದಲ ಪ್ರಾಶಸ್ತ್ಯದ 26 ಮತಗಳು ಹಾಗೂ 2ನೇ ಪ್ರಾಶಸ್ತ್ಯದ 45 ಮತಗಳು ಚಲಾವಣೆಯಾಗಿವೆ.
ಜೆಡಿಎಸ್ನ ಏಕೈಕ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಮೊದಲ ಪ್ರಾಶಸ್ತ್ಯದ 30 ಮತಗಳು ಚಲಾವಣೆಯಾಗಿವೆ. ಜೆಡಿಎಸ್ ನ ಇಬ್ಬರು ಶಾಸಕಾರದ ಕೋಲಾರದ ಶ್ರೀನಿವಾಸ್ ಗೌಡ ಅಡ್ಡಮತದಾನ ಮಾಡಿದರೆ, ಗುಬ್ಬಿ ಶ್ರೀನಿವಾಸ್ ಮತ ಚಲಾವಣೆಯೇ ಮಾಡಿಲ್ಲ.
ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿನ ಲೆಕ್ಕಾಚಾರ :
ಬಿಜೆಪಿಯ ಮೊದಲ ಮತ್ತು 2ನೇ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗ್ಗೇಶ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಜೈರಾಂ ರಮೇಶ್ ಸ್ಪಷ್ಟ ಮತಗಳ ಮೂಲಕ ಗೆಲುವು ಸಾಧಿಸಿದ್ದಾರೆ.
ಆದರೆ, 4 ನೇ ಸ್ಥಾನಕ್ಕೆ ಯಾರು ಗೆಲ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಜೆಡಿಎಸ್ನ ಕುಪೇಂದ್ರ ರೆಡ್ಡಿಯವರಿಗೆ ಕೇವಲ ಮೊದಲ ಪ್ರಶಸ್ತ್ಯದ 30 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ನ 2 ನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರಿಗೆ ಮೊದಲ ಪ್ರಾಶಸ್ತ್ಯದ 26 ಮತಗಳು ಹಾಗೂ ಎರಡನೇ ಪ್ರಾಶಸ್ತ್ಯದ 45 ಮತಗಳು ಚಲಾವಣೆಯಾಗಿವೆ. ಬಿಜೆಪಿಯ ಲೆಹರ್ಸಿಂಗ್ಗೆ ಮೊದಲ ಪ್ರಾಶಸ್ತ್ಯದ 30 ಮತಗಳು ಮತ್ತು ಎರಡನೇ ಪ್ರಾಶಸ್ತ್ಯದ 60 ಮತಗಳು ಚಲಾವಣೆಯಾಗಿವೆ. ಆ ಮೂಲಕ ಅತಿ ಹೆಚ್ಚು ಮತ ಪಡೆದ ಲೆಹರ್ ಸಿಂಗ್ ರಾಜ್ಯಸಭೆಗೆ ಕರ್ನಾಟಕ ವಿಧಾನಸಭೆಯಿಂದ ನಾಲ್ಕನೇ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ.