ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಮಾಡಿದ್ದ ರಣತಂತ್ರ ವಿಫಲವಾಗಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ರಾಜಸ್ಥಾನ ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಂದೀಪ್ ಸುರ್ಜೆವಾಲಾ, ಪ್ರಮೋದ್ ತಿವಾರಿ ಮತ್ತು ಮುಕುಲ್ ವಾಸ್ನಿಕ್ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯಿಂದ ಗ್ಯಾನ್ಶ್ಯಾಮ್ ತಿವಾರಿ ಗೆದ್ದಿದ್ದಾರೆ.
ಬಿಜೆಪಿ ಬೆಂಬಲದಿAದ ಸ್ವತಂತ್ರರಾಗಿ ಕೊನೆಯ ಕ್ಷಣದಲ್ಲಿ ಕಣಕ್ಕಿಳಿದಿದ್ದ ಝೀ ಟಿವಿ ಮಾಲೀಕ ಸುಭಾಷ್ ಚಂದ್ರ ಅವರಿಗೆ ಸೋಲಾಗಿದೆ. ಸುಭಾಷ್ಚಂದ್ರ ಅವರ ರಾಜ್ಯಸಭಾ ಸದಸ್ಯತ್ವ ಈ ಮೂಲಕ ಕೊನೆ ಆಗಿದೆ.
ರಾಜಸ್ಥಾನದಲ್ಲಿ ಬಿಜೆಪಿಯ ಇಬ್ಬರು ಶಾಸಕರೇ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ದಾರೆ. ಬಿಎಸ್ಪಿಯ ಆರು ಶಾಸಕರು ಕಾಂಗ್ರೆಸ್ ಪರ ಮತ ಹಾಕಿದ್ದಾರೆ.
200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 108, ಬಿಜೆಪಿ 71 ಮತ್ತು ಸ್ವತಂತ್ರರು 13 ಮತ್ತು ರಾಷ್ಟಿçÃಯ ಲೋಕತಾಂತ್ರಿಕ ಪಕ್ಷ 3, ಸಿಪಿಐಎಂನ 3, ಬಿಟಿಪಿಯ ಇಬ್ಬರು ಶಾಸಕರಿದ್ದಾರೆ.
ಇವರಲ್ಲಿ 126 ಶಾಸಕರ ಬೆಂಬಲ ಇರುವುದಾಗಿ ಕಾಂಗ್ರೆಸ್ ಹೇಳಿತ್ತು. ಒಬ್ಬ ಅಭ್ಯರ್ಥಿ ಗೆಲುವಿಗೆ 41 ಮತಗಳು ಬೇಕಿದ್ದವು.
ಮತದಾನ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ನ ಕೆಲವು ಶಾಸಕರು ತನಗೆ ಬೆಂಬಲ ನೀಡುತ್ತಾರೆ ಎಂದು ಝೀ ಟಿವಿ ಮಾಲೀಕ ಸುಭಾಷ್ಚಂದ್ರ ಘೋಷಿಸಿದ್ದರು. ಆದರೆ ಈ ಹೇಳಿಕೆಯನ್ನು ರಾಜಸ್ಥಾನ ಕಾಂಗ್ರೆಸ್ನ ಪ್ರಭಾವಿ ನಾಯಕ ಸಚಿನ್ ಪೈಲಟ್ ಆಕ್ಷೇಪಿಸಿದ್ದರು.