ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಟ್ರಸ್ಟ್ಗಳು ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಿ ಇವತ್ತು ಆದೇಶ ಹೊರಡಿಸಿದೆ.
ಚಿಕ್ಕಮಗಳೂರಿನಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೂ ಸರ್ಕಾರ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿದೆ.
ವಿಚಿತ್ರ ಎಂದರೆ ಅಗಲಿದ ಪೂರ್ಣಚಂದ್ರಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಪ್ರತಿಷ್ಠಾನದ ಮಹಿಳಾ ಸದಸ್ಯರನ್ನಾಗಿ ನೇಮಕ ಮಾಡಿದೆ.
ಡಿಸೆಂಬರ್ 14, 2021ರಂದು ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರು ನಿಧನರಾಗಿದ್ದಾರೆ.
8 ತಿಂಗಳ ಹಿಂದೆ ಅಗಲಿದ ರಾಜೇಶ್ವರಿ ಅವರನ್ನು ಪ್ರತಿಷ್ಠಾನದ ಮಹಿಳಾ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ನೋಡಿದರೆ ಸರ್ಕಾರದಲ್ಲಿರುವ ಅಧಿಕಾರಿಗಳ ಬೌದ್ಧಿಕ ಮಟ್ಟ ಮತ್ತು ಪ್ರಜ್ಞೆಯ ಬಗ್ಗೆಯೇ ಪ್ರಶ್ನೆ ಮೂಡುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನ ಕಾರ್ಯದರ್ಶಿ ಕೆ ಆರ್ ರಮೇಶ್ ಅವರ ಸಹಿಯೊಂದಿಗೆ ಪ್ರತಿಷ್ಠಾನ ಮತ್ತು ಟ್ರಸ್ಟ್ಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಆದೇಶ ಹೊರಡಿಸಲಾಗಿದೆ.
ADVERTISEMENT
ADVERTISEMENT