ರಾಜ್ಯದಲ್ಲಿ ಮುಂಗಾರು ಚುರುಕು: ಆದರೆ ಭಾರೀ ಮಳೆ ಕೊರತೆ

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆಯಾದರೂ ರಾಜ್ಯದಲ್ಲಿ ಜೂನ್​ ತಿಂಗಳಲ್ಲಿ ಭಾರೀ ಮಳೆ ಕೊರತೆ ಆಗಿದೆ.

ಜೂನ್​ 1ರಿಂದ ಜೂನ್​ 24ರವರೆಗೆ ರಾಜ್ಯದಲ್ಲಿ ಸರಾಸರಿ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಶೇಕಡಾ 66ರಷ್ಟು ಮಳೆ ಕೊರತೆ ಉಂಟಾಗಿದೆ.

ಜೂನ್​ 1ರಿಂದ ಜೂನ್​ 24ರ ಅವಧಿಯಲ್ಲಿ ರಾಜ್ಯದಲ್ಲಿ ಆಗುತ್ತಿದ್ದ ಸರಾಸರಿ ಮಳೆ ಪ್ರಮಾಣ 145.2 ಮಿಲಿಮೀಟರ್​. ಆದರೆ ಈ ವರ್ಷ ಕೇವಲ 48.4 ಮಿಲಿ ಮೀಟರ್​ನಷ್ಟು ಮಳೆಯಾಗಿದೆ.

ಜೂನ್​ 1ರಿಂದ 24ವರೆಗೆ

ಸರಾಸರಿ (ಮಿಲಿಮೀಟರ್​)

ಈ ಬಾರಿ

ಕೊರತೆ

ರಾಜ್ಯದಲ್ಲಿ 

145.2

48.4

66%

ದಕ್ಷಿಣ ಒಳನಾಡು

57

45

21%

ಉತ್ತರ ಒಳನಾಡು

82

29

65%

ಮಲೆನಾಡು 

266

58

78%

ಕರಾವಳಿ ಕರ್ನಾಟಕ

619

118

70%

ದಕ್ಷಿಣ ಒಳನಾಡು ಪ್ರದೇಶದಲ್ಲಿ ಸರಾಸರಿ 57 ಮಿಲಿ ಮೀಟರ್​ ಮಳೆ ಆಗುತ್ತಿತ್ತು, ಆದ್ರೆ 45 ಮಿಲಿ ಮೀಟರ್​ ಮಳೆ ಆಗಿದ್ದು ಜೂನ್​ 1ರಿಂದ ಜೂನ್​ 24ರವರೆಗೆ ಶೇಕಡಾ 21ರಷ್ಟು ಮಳೆ ಕೊರತೆಯಾಗಿದೆ.

ಉತ್ತರ ಒಳನಾಡಿನಲ್ಲಿ ಜೂನ್​ 1ರಿಂದ ಜೂನ್​ 24ರ ಅವಧಿಯಲ್ಲಿ 82 ಮಿಲಿ ಮೀಟರ್​ ಮಳೆ ಆಗುತ್ತಿತ್ತು. ಆದರೆ ಈ ಬಾರಿ 29 ಮಿಲಿ ಮೀಟರ್​ ಮಳೆಯಾಗಿದ್ದು ಶೇಕಡಾ 65ರಷ್ಟು ಮಳೆ ಕೊರತೆ ಉಂಟಾಗಿದೆ.

ಮಲೆನಾಡು ಭಾಗದಲ್ಲಿ ವಾಡಿಕೆಯ 266 ಮಿಲಿ ಮೀಟರ್​ ಮಳೆ ಬದಲು ಕೇವಲ 58 ಮಿಲಿಮೀಟರ್​ ಮಳೆಯಾಗಿದ್ದು, ಶೇಕಡಾ 78ರಷ್ಟು ಮಳೆ ಕೊರತೆಯಾಗಿದೆ.

ಕರಾವಳಿ ಕರ್ನಾಟಕದಲ್ಲಿ ಸರಾಸರಿ 619 ಮಿಲಿ ಮೀಟರ್​ ಮಳೆ ಬದಲು 118 ಮಿಲಿ ಮೀಟರ್​ ಮಳೆಯಾಗಿದ್ದು ಶೇಕಡಾ 70ರಷ್ಟು ಮಳೆ ಕೊರತೆಯಾಗಿದೆ.