Insurance: ಕೇವಲ 35 ಪೈಸೆಗೆ ವಿಮೆ, 10 ಲಕ್ಷ ರೂಪಾಯಿವರೆಗೆ ಪರಿಹಾರ – ರೈಲು ಟಿಕೆಟ್​ ಬುಕ್ಕಿಂಗ್​ ವೇಳೆ ನೆನಪಿಡಿ

ರೈಲಿನಲ್ಲಿ (Rail Passengers) ಪ್ರಯಾಣಿಸುವವರು ಒಂದು ವೇಳೆ ಆನ್​ಲೈನ್ (Online Booking)​ ಮೂಲಕ ಟಿಕೆಟ್​ ಖರೀದಿಸಿದರೆ ಅವರಿಗೆ ವಿಮೆ (Insurance) ಸೌಲಭ್ಯ ಲಭ್ಯವಿದೆ.

ಅಂದಹಾಗೆ ಈ ವಿಮೆಗೆ ಟಿಕೆಟ್​ ಬುಕ್ಕಿಂಗ್ (Ticket Booking) ವೇಳೆ ಪ್ರತಿಯೊಬ್ಬ ಪ್ರಯಾಣಿಕರು ಪಾವತಿಸಬೇಕಾದ ಮೊತ್ತ ಕೇವಲ 35 ಪೈಸೆ. 

ಆದರೆ ವಿಮೆ ಖರೀದಿ ಕಡ್ಡಾಯವಲ್ಲ, ಅದು ಪ್ರಯಾಣಿಕರ ಆಯ್ಕೆಗೆ ಬಿಟ್ಟಿದ್ದು. ಒಂದು ವೇಳೆ ಐಆರ್​ಸಿಟಿಸಿ ಆ್ಯಪ್​ನಲ್ಲಿ ಟಿಕೆಟ್​ ಬುಕ್ಕಿಂಗ್ ವೇಳೆ ವಿಮೆ ಬೇಡ ಎಂದು ಪ್ರಯಾಣಿಕರು ನಿರ್ಧರಿಸಿದರೆ 35 ಪೈಸೆ ಪಾವತಿಸಬೇಕಿಲ್ಲ.

ಒಂದು ವೇಳೆ ಟಿಕೆಟ್​ ಬುಕ್ಕಿಂಗ್​ ಪ್ರಕ್ರಿಯೆ ಮುಗಿದ ಬಳಿಕ ಆ ವಿಮೆ ಬೇಕೆಂದು ತೀರ್ಮಾನಿಸಿದರೂ ಆ ಸೌಲಭ್ಯ ಪಡೆಯಲು ಅವಕಾಶವಿಲ್ಲ. ಅಂದಹಾಗೆ ಪ್ರತಿ ಪ್ರಯಾಣಕ್ಕೂ ಪ್ರತ್ಯೇಕವಾಗಿಯೇ 35 ಪೈಸೆ  ಪಾವತಿಸಿ ವಿಮೆ ಸೌಲಭ್ಯ ಪಡೆಯಬೇಕಾಗುತ್ತದೆ.

ಎಸ್​ಬಿಐ ಜನರಲ್​ ಇನ್ಸೂರೆನ್ಸ್​ (SBI General Insurance) ಮತ್ತು ಲಿಬರ್ಟಿ ಜನರಲ್​ ಇನ್ಸೂರೆನ್ಸ್​ (Liberty General Insurance) ಮೂಲಕ ಐಆರ್​​ಸಿ​ಟಿಸಿ (IRCTC) ಈ ವಿಮೆಯನ್ನು ನಿರ್ವಹಿಸುತ್ತದೆ.

ಪ್ರತಿ ಬಾರಿ ಪ್ರಯಾಣದ ವೇಳೆ 35 ಪೈಸೆಯ ವಿಮೆ ಮಾಡಿಸಿಕೊಂಡಂತೆ ರೈಲು ಅಪಘಾತದ ಸಂದರ್ಭದಲ್ಲಿ ವಿಮಾ ಕಂಪನಿಗಳ ಅಂತಹ ಪ್ರಯಾಣಿಕರಿಗೆ ಅಥವಾ ಅವರ ಕುಟುಂಬಸ್ಥರಿಗೆ ಸಿಗುವ ಲಾಭ ಹೀಗಿದೆ:

ರೈಲು ದುರಂತದಲ್ಲಿ ಮೃತಪಟ್ಟರೆ: ಮೃತರ ಕುಟುಂಬಸ್ಥರಿಗೆ ವಿಮೆ ಮೊತ್ತದ ಭಾಗವಾಗಿ 10 ಲಕ್ಷ ರೂಪಾಯಿ ಪರಿಹಾರ 

ರೈಲು ಅಪಘಾತದಿಂದ ಶಾಶ್ವತ ವಿಕಲಚೇತನರಾದರೆ: ಆಗ ಆ ಗಾಯಾಳುವಿಗೆ 10 ಲಕ್ಷ ರೂಪಾಯಿ ವಿಮಾ ಪರಿಹಾರ

ರೈಲು ಅಪಘಾತದಿಂದ ಭಾಗಶಃ ವಿಕಲಚೇತನರಾದರೆ: ಆಗ ಆ ಗಾಯಾಳುವಿಗೆ 10 ಲಕ್ಷ ರೂಪಾಯಿ ಪರಿಹಾರ

ರೈಲು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ: ಆ ಪ್ರಯಾಣಿಕರ 2 ಲಕ್ಷ ರೂಪಾಯಿ ಮೊತ್ತದವರೆಗಿನ ಆಸ್ಪತ್ರೆ ವೆಚ್ಚ ಪಾವತಿ.

ಮೃತದೇಹ ರವಾನೆಗೆ: 10 ಸಾವಿರ ರೂಪಾಯಿ

ಜೂನ್​ 2ರಂದು ಒಡಿಶಾದಲ್ಲಿ ಅಪಘಾತಕ್ಕೀಡಾಗಿದ್ದ ಎರಡು ಎಕ್ಸ್​ಪ್ರೆಸ್​ ರೈಲುಗಳಲ್ಲಿ ಆನ್​ಲೈನ್​ ಮೂಲಕ ಟಿಕೆಟ್​ ಬುಕ್​ ಮಾಡಿದ್ದವರ ಸಂಖ್ಯೆ 2,296. ಇವರಲ್ಲಿ 780 ಮಂದಿಯಷ್ಟೇ ಟಿಕೆಟ್​ ಬುಕ್ಕಿಂಗ್​ ವೇಳೆ 35 ಪೈಸೆ ಪಾವತಿಸಿ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅಪಘಾತದಲ್ಲಿ 294 ಮಂದಿ ಸಾವನ್ನಪ್ಪಿದ್ದರು.

ಈ ದುರಂತದಲ್ಲಿ ಅಂಗವಿಕಲತೆಗೆ ಒಳಗಾಗಿ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಇಲ್ಲಿಯವರೆಗೆ 42.5 ಲಕ್ಷ ರೂಪಾಯಿ ಮೊತ್ತ ಪಾವತಿಸಲಾಗಿದೆ ಮತ್ತು ಆಸ್ಪತ್ರೆ ವೆಚ್ಚದ ಭಾಗವಾಗಿ ಅರ್ಜಿ ಸಲ್ಲಿಸಿದವರಿಗೆ 5.77 ಲಕ್ಷ ರೂಪಾಯಿ ಪಾವತಿಸಲಾಗಿದೆ.

LEAVE A REPLY

Please enter your comment!
Please enter your name here