ADVERTISEMENT
ಹರಿಯಾಣದಲ್ಲಿ ರಾಹುಲ್ ಗಾಂಧಿ (Rahul Gandhi) ರೈತರ ಜೊತೆ ಬೆರೆತು ರೈತರಾಗಿದ್ದಾರೆ. ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ. ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಿದ್ದಾರೆ.
ದೆಹಲಿಯಿಂದ ಹಿಮಾಚಲಪ್ರದೇಶಕ್ಕೆ ತೆರಳುವ ಮಾರ್ಗಮಧ್ಯೆ ಸೋನಿಪತ್ನಲ್ಲಿ ಕಾರು ನಿಲ್ಲಿಸಿದ ಬರೋಡಾ, ಮದಿನಾ ಸೇರಿ ಹಲವು ಹಳ್ಳಿಗಳ್ಳಲ್ಲಿ ಸುತ್ತಾಡಿದರು.
ಹೊಲದಲ್ಲಿ ಕೃಷಿ ಕಾರ್ಯದಲ್ಲಿ (Farming) ನಿರತರಾಗಿದ್ದ ರೈತರ ಜೊತೆ ರಾಹುಲ್ ಗಾಂಧಿ ಖುಷಿ ಖುಷಿಯಾಗಿ ಬೆರೆತರು. ಅವರ ಕಷ್ಟ ಸುಖಗಳಿಗೆ ದನಿಯಾದರು..
ರೈತರ ಕಷ್ಟವನ್ನು ತಿಳಿಯಲು ಟ್ರ್ಯಾಕ್ಟರ್ (Tractor) ಮೂಲಕ ಹೊಲವನ್ನು ಉಳುಮೆ ಮಾಡಿದರು. ರೈತರ ಜೊತೆ ಸೇರಿ ಭತ್ತ ನಾಟಿ ಮಾಡಿದರು.
ಭಾರತ್ ಜೋಡೋ ಯಾತ್ರೆ ನಡೆಸಿದ ದಿನದಿಂದಲೂ ರಾಹುಲ್ ಗಾಂಧಿ ಜನಸಾಮಾನ್ಯರೊಡನೆ ಬೆರೆಯುವ ಪರಿಪಾಠವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ವಿವಿಧ ವರ್ಗಗಳ ಜೊತೆ ಬೆರೆತು ಅವರ ಕಷ್ಟ ಸುಖಗಳನ್ನು ತಿಳಿಯ ತೊಡಗಿದ್ದಾರೆ.
ADVERTISEMENT