ಎಐಸಿಸಿ ಅಗ್ರ ನಾಯಕ ರಾಹುಲ್ ಗಾಂಧಿ ಜನರೊಟ್ಟಿಗೆ ಬೆರೆಯುತ್ತಿದ್ದು, ಅವರ ಕಷ್ಟ ಸುಖಗಳಿಗೆ ದನಿಯಾಗುವ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರು, ಅಸಮಘಟಿತ ವಲಯದ ಕಾರ್ಮಿಕರ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಾರೆ.
ಮಂಗಳವಾರ ಸಂಜೆ ದೆಹಲಿಯ ಕರೋಲ್ಬಾಗ್ನಲ್ಲಿರುವ ಬೈಕ್ ಮೆಕಾನಿಕ್ ಶಾಪ್ಗೆ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದ ರಾಹುಲ್ ಗಾಂಧಿ ಕೆಲವು ಕ್ಷಣ ತಾವು ಕೂಡ ಬೈಕ್ ಮೆಕಾನಿಕ್ ಆದರು.
ಭಾರತವನ್ನು ನಿರ್ಮಿಸುತ್ತಿರುವುದು ಈ ಕೈಗಳು ಮತ್ತು ಈ ಬಟ್ಟೆಯ ಮೇಲಿನ ಮಸಿ.. ಈ ಕೈಗಳ ಬಗ್ಗೆ ನಮಗೆ ಹೆಮ್ಮೆಯಿದೆ.. ಈ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ… ಭಾರತ್ ಜೋಡೋ ಯಾತ್ರೆ ಮುಂದುವರೆಯಲಿದೆ