ಲಾಡೆನ್ ರೀತಿ ಗಡ್ಡ ಬೆಳೆಸಿಕೊಂಡ್ರೆ ಪ್ರಧಾನಿ ಆಗಲ್ಲ – ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ

ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಅಗ್ರ ನೇತಾರ ರಾಹುಲ್ ಗಾಂಧಿ ಕುರುಚಲು ಗಡ್ಡದೊಂದಿಗೆ ಕಾಣಿಸಿಕೊಂಡಿದ್ದರು. ಯಾತ್ರೆ ಪೂರ್ಣಗೊಂಡ ಬೆನ್ನಲ್ಲೇ ಗಡ್ಡವನ್ನು ಟ್ರಿಮ್ ಮಾಡಿಸಿದ್ದರು.

ಇದೀಗ ರಾಹುಲ್ ಗಾಂಧಿ ಗಡ್ಡದ ಬಗ್ಗೆ ಬಿಹಾರ ಬಿಜೆಪಿ  ಅಧ್ಯಕ್ಷ ಸಾಮ್ರಾಟ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅರಾರಿಯಾ ಜಿಲ್ಲೆಯಲ್ಲಿ ನಿರ್ವಹಿಸಿದ ಪಕ್ಷದ ರ‍್ಯಾಲಿಯಲ್ಲಿ ಸಾಮ್ರಾಟ್ ಚೌಧರಿ ಭಾಷಣ ಮಾಡಿದರು.

ಒಸಾಮಾ ಬಿನ್ ಲಾಡೆನ್ ರೀತಿ ರಾಹುಲ್ ಗಾಂಧಿ ಗಡ್ಡ ಬೆಳೆಸಿಕೊಂಡಿದ್ದಾರೆ.. ಮೋದಿಯಂತೆ ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಯಾರೇ ಆಗಲಿ ಗಡ್ಡ ಬೆಳೆಸಿದ ಮಾತ್ರಕ್ಕೆ ದೇಶದ ಪ್ರಧಾನಿಯಾಗಲಾರರು ಎಂದು ರಾಹುಲ್ ಗಾಂಧಿಯನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ.

ಸಾಮ್ರಾಟ್ ಚೌಧರಿಯ ಈ ಹೇಳಿಕೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಸಾಮ್ರಾಟ್ ಚೌಧರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಕೊರಿದ್ದಾರೆ.