ಲೋಕಸಭಾ ಚುನಾವಣೆಯಲ್ಲಿ BJP ಸೋಲಿಸ್ತೇವೆ, ಅಚ್ಚರಿ ಕಾದಿದೆ – ರಾಹುಲ್​ ಗಾಂಧಿ

2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟ ಬಿಜೆಪಿಯನ್ನು ಸೋಲಿಸಲಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಉತ್ತಮ ಪ್ರದರ್ಶನ ನೀಡಲಿದೆ ಎಂಬುದು ನನ್ನ ಅನಿಸಿಕೆ. ನನ್ನ ಪ್ರಕಾರ ಅದು ಜನರನ್ನು ಅಚ್ಚರಿಗೊಳಿಸಬಹುದು. ಲೆಕ್ಕಹಾಕಿ ಅಷ್ಟೇ, ಪ್ರತಿಪಕ್ಷಗಳ ಒಕ್ಕೂಟ ಬಿಜೆಪಿಯನ್ನು ಸೋಲಿಸಲಿದೆ
ಎಂದು ಅಮೆರಿಕ ರಾಜಧಾನಿ ವಾಷಿಂಗ್ಟನ್​ನಲ್ಲಿ ನ್ಯಾಷನಲ್​ ಪ್ರೆಸ್​ ಕ್ಲಬ್​ನಲ್ಲಿ ನಡೆದ ಸಂವಾದದಲ್ಲಿ ಹೇಳಿದ್ದಾರೆ.
ವಿಪಕ್ಷಗಳು ಒಗ್ಗಟ್ಟಾಗಿವೆ. ನಾವು ಎಲ್ಲ ವಿರೋಧ ಪಕ್ಷಗಳ ಜೊತೆಗೆ ಸಂವಾದ ನಡೆಸುತ್ತಿದ್ದೇವೆ. ಒಳ್ಳೆಯ ಬೆಳವಣಿಗೆ ಆಗುತ್ತಿದೆ ಎಂದು ನನಗೆ ಅನಿಸುತ್ತಿದೆ. ಇದು ಸಂಕೀರ್ಣ ಮಾತುಕತೆ ಕಾರಣ ಕೆಲವು ಕಡೆಗಳಲ್ಲಿ ಆ ಪಕ್ಷಗಳ ಜೊತೆಗೆಯೇ ಸ್ಪರ್ಧಿಸುತ್ತಿವೆ. ಹೀಗಾಗಿ ಸ್ವಲ್ಪ ಮಟ್ಟಿನ ಕೊಡುಕೊಳ್ಳುವಿಗೆ ಅಗತ್ಯವಿದೆ
ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.
ಆದರೆ ನನಗೆ ಮಹಾಮೈತ್ರಿಕೂಟ ಏರ್ಪಡಲಿದೆ ಎಂಬ ವಿಶ್ವಾಸವಿದೆ
ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ