BIG BREAKING: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅನರ್ಹತೆ ರದ್ದು – ಸ್ಪೀಕರ್​ ಆದೇಶ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಲೋಕಸಭಾ ಸಂಸದ ಅನರ್ಹತೆ ರದ್ದಾಗಿದೆ. ಇವತ್ತಿನಿಂದಲೇ ರಾಹುಲ್​ ಅವರು ಲೋಕಸಭೆ ಕಲಾಪಗಳಲ್ಲಿ ಭಾಗವಹಿಸಬಹುದಾಗಿದೆ.

ಅನರ್ಹತೆ ಆದೇಶವನ್ನು ರದ್ದುಪಡಿಸಿ ಇವತ್ತು ಬೆಳಗ್ಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರು ಆದೇಶಿಸಿದ್ದಾರೆ.

ಈ ಮೂಲಕ ವಯನಾಡು ಸಂಸದ ರಾಹುಲ್​ ಗಾಂಧಿ ಅವರಿಗೆ ಮತ್ತೆ ಲೋಕಸಭಾ ಸಂಸದ ಸ್ಥಾನದ ಮಾನ್ಯತೆ ಸಿಕ್ಕಿದೆ.

ಸುಪ್ರೀಂಕೋರ್ಟ್​ನ ಮೂವರು ನ್ಯಾಯಮೂರ್ತಿಗಳ ಪೀಠ ರಾಹುಲ್​ ಗಾಂಧಿ ಅವರು ದೋಷಿ ಎಂದು ಸೂರತ್​ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿತ್ತು.

ಲೋಕಪ್ರಹಾರಿ ಮತ್ತು ಚುನಾವಣಾ ಆಯೋಗದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪಿನ ಪ್ರಕಾರ ಒಂದು ವೇಳೆ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ಸಿಕ್ಕ ತಕ್ಷಣವೇ ಅನರ್ಹತೆ ರದ್ದಾಗಿ ಶಾಸಕ ಅಥವಾ ಸಂಸದ ಸದಸ್ಯತ್ವ ಮತ್ತೆ ಸಿಗಲಿದೆ.

ನಾಳೆಯಿಂದ ಆಗಸ್ಟ್​ 11ರವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಅನರ್ಹತೆ ರದ್ದು ಮಹತ್ವ ಪಡೆದಿದೆ.

ಮಾರ್ಚ್​ 23ರಂದು ಸೂರತ್​ ನ್ಯಾಯಾಲಯದ ಆದೇಶ ಬೆನ್ನಲ್ಲೇ ರಾಹುಲ್​ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು.

ಅನರ್ಹತೆ ರದ್ದತಿಯಿಂದ ರಾಹುಲ್​ ಅವರು ಮತ್ತೆ ಲೋಕಸಭಾ ಕಲಾಪಗಳಲ್ಲಿ ಭಾಗವಹಿಸಬಹುದು ಮತ್ತು ಪ್ರಧಾನಿ ಮೋದಿ ಸರ್ಕಾರದ ವೈಫಲ್ಯಗಳನ್ನು ಸದನದಲ್ಲೇ ಎತ್ತಿಹಿಡಿಯುವ ಅವಕಾಶ ಸಿಕ್ಕಿದೆ.

ಆಗಸ್ಟ್​ 11ರಂದು ಸಂಸತ್ತಿನ ಮಳೆಗಾಲದ ಅಧಿವೇಶನ ಅಂತ್ಯವಾಗಲಿದೆ.

LEAVE A REPLY

Please enter your comment!
Please enter your name here