ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಕೋಚ್..? – ಒಪ್ಪಿಕೊಂಡ್ರಾ ವಾಲ್..?

ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗುವ ಸಾಧ್ಯತೆ ಇದೆ. ಮಧ್ಯಂತರ ಕೋಚ್ ಆಗಿ ದ್ರಾವಿಡ್ ಅವರನ್ನು ಬಿಸಿಸಿಐ ನೇಮಕ ಮಾಡಬಹುದು ಎಂದು ತಿಳಿದುಬಂದಿದೆ.

ಟಿ-ಟ್ವೆAಟಿ ವಿಶ್ವಕಪ್ ಬಳಿಕ ಈಗಿರುವ ಮುಖ್ಯ ಕೋಚ್ ರವಿಶಾಸ್ತಿç, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚಗ್ ಆರ್ ಶ್ರೀಧರ್ ಮತ್ತು ಟೀಂ ಇಂಡಿಯಾ ಟ್ರೆöÊನರ್ ನಿಕ್ ವೆಬ್ಬ್ ಅವಧಿ ಮುಗಿಯಲಿದೆ. ಹೀಗಾಗಿ ಹೊಸ ಕೋಚ್ ಹುಡುಕಾಟದಲ್ಲಿ ಬಿಸಿಸಿಐ ತೊಡಗಿದೆ. ಆದರೆ ಪೂರ್ಣಪ್ರಮಾಣದ ಕೋಚ್‌ನ್ನು ಅಂತಿಮಗೊಳಿಸಲು ಇನ್ನಷ್ಟು ಸಮಯ ಬೇಕಾಗಿರುವ ಕಾರಣ ಮಧ್ಯಂತರ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಕ ಮಾಡಬಹುದು ಎನ್ನಲಾಗಿದೆ.

ನವೆಂಬರ್ 17ರಿಂದ ಶುರು ಆಗುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ದ್ರಾವಿಡ್ ಮಧ್ಯಂತರ ಕೋಚ್ ಆಗುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here