ಬಿಜೆಪಿ ಕಾರ್ಯಕರ್ತರಿಗೆ ಥಳಿತ – ಮೂವರು ಪೊಲೀಸ್​ ಅಧಿಕಾರಿಗಳು ಅಮಾನತು

ಪುತ್ತೂರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಠಾಣೆಗೆ ಕರೆಸಿ ಅಮಾನುಷವಾಗಿ ಥಳಿಸಿದ್ದ ಪೊಲೀಸ್​ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗಿದೆ.

ಪುತ್ತೂರು ಗ್ರಾಮೀಣ ಠಾಣೆ ಸಬ್​ ಇನ್ಸ್​ಪೆಕ್ಟರ್​ ಶ್ರೀನಾಥ್​ ರೆಡ್ಡಿ ಮತ್ತು ಕಾನ್ಸ್ ಸ್ಟೇಬಲ್​ ಹರ್ಷಿತ್​​  ಮತ್ತು ಪುತ್ತೂರು ಡಿವೈಎಸ್​ಪಿ ಅವರನ್ನು ಅಮಾನತು ಮಾಡಲಾಗಿದೆ.

ಥಳಿತಕ್ಕೊಳಗಾದ ಅವಿನಾಶ್​ ಅವರ ತಂದೆ ಪುತ್ತೂರು ಡಿವೈಎಸ್​ಪಿ ವಿರುದ್ಧದ ಕೊಟ್ಟ ದೂರನ್ನು ಆಧರಿಸಿ ಮೂವರು ಪೊಲೀಸ್​ ಅಧಿಕಾರಿಗಳ ಮೇಲೂ ಎಫ್​ಐಆರ್​ ದಾಖಲಾಗಿದ್ದು, ಮೂವರನ್ನೂ ಅಮಾನತು ಮಾಡಲಾಗಿದೆ.

ಈ ಮೂವರ ವಿರುದ್ಧದ ಇಲಾಖಾ ತನಿಖೆ ಜವಾಬ್ದಾರಿಯನ್ನು ಬಂಟ್ವಾಳ ಡಿವೈಎಸ್​ಪಿ ನೀಡಿ ಪೊಲೀಸ್​ ಇಲಾಖೆ ಆದೇಶಿಸಿದೆ.

ಪುತ್ತೂರಲ್ಲಿ ಬಿಜೆಪಿ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಮತ್ತು ಸಂಸದ ಡಿ ವಿ ಸಂದಾನಂದ ಗೌಡ ಎಂದು ಆರೋಪಿಸಿ ಅವರ ಭಾವಚಿತ್ರ ಇರುವ ಪೋಸ್ಟರ್​​ಗೆ ಚಪ್ಪಲಿ ಹಾರ ಹಾಕಿ ಪ್ರತಿಭಟಿಸಲಾಗಿತ್ತು.

ಆ ಬಳಿಕ ಪೊಲೀಸರು ಈ ಪೋಸ್ಟರ್​ ಹಾಕಿದ್ದಾರೆ ಎಂಬ ಆರೋಪದಡಿ ಐವರು ಯುವಕರನ್ನು ಠಾಣೆಗೆ ಕರೆಸಿ ಥಳಿಸಿದ್ದರು.