PUSHPA: ಅಲ್ಲು ಅರ್ಜುನ್ ನಟನೆಯ  ಪುಷ್ಪ, ದಿ ರೈಸ್ ಸಿನಿಮಾಗೆ ಕರ್ನಾಟಕದಲ್ಲಿ  ವಿರೋಧ  ಏಕೆ?

ಅಲ್ಲು ಅರ್ಜುನ್ ನಟನೆಯ  ಪುಷ್ಪ, ದಿ ರೈಸ್ ಪಾನ್ ಇಂಡಿಯಾ ಸಿನಿಮಾ ಭಾರತ, ಅಮೇರಿಕಾ ಸೇರಿ ಹಲವೆಡೆ  ತೆರೆ ಕಂಡಿದೆ.

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ ನಟನೆಯ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಟಾಕ್ ಕೂಡ  ಚನ್ನಾಗಿದೆ. #Pushpatherise ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

https://twitter.com/Deepi2Siva/status/1471685365320720386?s=19

ಆದರೆ, ಕರ್ನಾಟಕದಲ್ಲಿ ಮಾತ್ರ  ಪುಷ್ಪ ಸಿನಿಮಾ ಬಾಯ್ ಕಾಟ್ ಮಾಡುವಂತೆ ಕೆಲವರು ಡಿಮ್ಯಾಂಡ್ ಮಾಡುತ್ತಿದ್ದಾರೆ.

#BoycottPushpaInKarnataka ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.

ಕರ್ನಾಟಕದಲ್ಲಿ ಕನ್ನಡಕ್ಕಿಂತ ತೆಲುಗು ವರ್ಷನ್ ಸಿನಿಮಾಗೆ ಹೆಚ್ಚು ಸ್ಕ್ರೀನ್ ನಿಗದಿ  ಮಾಡಿರೋದು  ಸರಿಯಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದು ಆಂಧ್ರ ಅಲ್ಲ.. ಇದು ಕರ್ನಾಟಕ. ಕನ್ನಡ  ವರ್ಷನ್ ಸಿನಿಮಾವನ್ನು ಹೆಚ್ಚು ಸ್ಕ್ರೀನ್ ಗಳಲ್ಲಿ  ಬಿಡುಗಡೆ  ಮಾಡಿ. ಇಲ್ಲ ಅಂದ್ರೆ ಈ ಸಿನಿಮಾವನ್ನು ಬಹಿಷ್ಕರಿಸುತ್ತೇವೆ” ಎಂದು  gowdaraitha ಎಂಬ ನೆಟ್ಟಿಗ ಟ್ವೀಟ್ ಮಾಡಿದ್ದಾರೆ.

https://twitter.com/gowdaraitha/status/1471669324649689089?s=19

ಕರ್ನಾಟಕದಲ್ಲಿ ಪುಷ್ಪ ಸಿನಿಮಾವನ್ನು ಕನ್ನಡ ಭಾಷೆಯಲ್ಲೇ ರಿಲೀಸ್ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ತೆಲುಗು ಜನತೆಯೇ.. ಪುಷ್ಪ  ಸಿನಿಮಾಗೆ ನಾವು  ವಿರುದ್ಧ  ಅಲ್ಲ. ತೆಲುಗು ಸಿನಿಮಾ ವಿರೋಧಿಗಳು  ಕೂಡ ಅಲ್ಲ.. ಆದರೆ ಕರ್ನಾಟಕದಲ್ಲಿ ಕನ್ನಡ  ವರ್ಷನ್ ಸಿನಿಮಾ ರಿಲೀಸ ಮಾಡಬೇಕು. ನಮಗೆ ಕನ್ನಡಕ್ಕಿಂತ ಯಾವುದು  ಗ್ರೇಟ್ ಅಲ್ಲ” ಎಂದು  Nav_Mocktail ಎಂಬ ಯೂಸರ್ ಟ್ವೀಟ್ ಮಾಡಿದ್ದಾರೆ.

https://twitter.com/NMocktail/status/1471367127508475905?s=19

ಕರ್ನಾಟಕದಲ್ಲಿ ತೆಲುಗು ಭಾಷೆಯನ್ನು ಬಲವಂತವಾಗಿ ಹೇರುವ ಹಕ್ಕು ಯಾರಿಗೂ  ಇಲ್ಲ ಎಂದು Dikshit46194286 ಎಂಬುವವರು  ಟ್ವೀಟ್ ಮಾಡಿದ್ದಾರೆ.

https://twitter.com/Dikshit46194286/status/1471360691546116098?s=19

ಕರ್ನಾಟಕದಲ್ಲಿ ಕನ್ನಡ  ಭಾಷೆಯ ಸಿನಿಮಾ ರಿಲೀಸ್ ಮಾಡುವ ಉದ್ದೇಶ ಇಲ್ಲದಿದ್ದರೆ, ಪುಷ್ಪ  ಸಿನಿಮಾಗೆ ಕನ್ನಡ  ಡಬ್ಬಿಂಗ್ ಮಾಡಿದ್ದು ಏಕೆ, ನಂಗಂತೂ ಅರ್ಥ  ಆಗುತ್ತಿಲ್ಲ” ಎಂದು ದಿಲೀಪ್ ನಾಯಕ್ ಎಂಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

https://twitter.com/dilipnaikr/status/1471354511918727173?s=19

LEAVE A REPLY

Please enter your comment!
Please enter your name here