ADVERTISEMENT
ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದ್ದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪುಷ್ಪಾ (Pusha – The Rise) ಕೂಡಾ ಒಂದು. ಈಗ ಪುಷ್ಪಾ ಜೋಡಿ ಅಲ್ಲು ಅರ್ಜುನ್ (Allu Arjun) ಮತ್ತು ಕನ್ನಡತಿ ರಶ್ಮಿಕ ಮಂದಣ್ಣ (Rashmika Mandanna) ಮತ್ತೆ ಪುಷ್ಪಾ -ದಿ ರೂಲ್ (Pushpa – The Rule)ನಲ್ಲಿ ಜೋಡಿ ಆಗುತ್ತಿದ್ದಾರೆ.
ಪುಷ್ಪಾ-2ನ ಮುಹೂರ್ತ ಪೂಜೆ ನಡೆದಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಮುಹೂರ್ತದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ಮಿಸ್ತಿರುವ ಮೈತ್ರಿ ಮೂವಿ ಪ್ರೊಡಕ್ಷನ್ ಇದು ದೊಡ್ಡ ಮತ್ತು ಇನ್ನಷ್ಟು ಗ್ರ್ಯಾಂಡ್ ಆಗಿರುವ ಸಿನಿಮಾ ಎಂದು ಹೇಳಿಕೊಂಡಿದೆ. ಶೀಘ್ರವೇ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ.
ಮೂಲಗಳ ಪ್ರಕಾರ ಪುಷ್ಪಾ-2 ಸಿನಿಮಾದ ನಿರ್ಮಾಣ ವೆಚ್ಚವೂ 200 ಕೋಟಿ ರೂಪಾಯಿ ಮೀರುವ ಸಾಧ್ಯತೆ ಇದೆ. ಪುಷ್ಪಾ 365 ಕೋಟಿ ರೂಪಾಯಿಯಷ್ಟು ಗಳಿಕೆ ಕಂಡಿತ್ತು.
ಮುಂದಿನ ವರ್ಷ ಪುಷ್ಪಾ ದಿ ರೂಲ್ ಥಿಯೇಟರ್ಗೆ ಅಪ್ಪಳಿಸುವ ನಿರೀಕ್ಷೆ ಇದೆ. ಮಲಯಾಳಂ ನಟ ಫಾಹದ್ ಫಾಸಿಲ್ (Fahad Faasil) ಅವರು ನೆಗೆಟಿವ್ ರೂಲ್ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ADVERTISEMENT