ಪಂಜಾಬ್ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಮನ್ಸಾ ಜಿಲ್ಲೆಯಲ್ಲಿ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ನಿನ್ನೆ ಶನಿವಾರವಷ್ಟೇ ಪಂಜಾಬ್ ಸರ್ಕಾರ ಸಿಧು ಮೂಸೆ ವಾಲಾ ಅವರನ್ನು ಒಳಗೊಂಡಂತೆ 424 ಜನರಿಗೆ ನೀಡಿದ್ದ ವಿಐಪಿ ಭದ್ರತೆಯನ್ನು ವಾಪಾಸ್ ಪಡೆದಿತ್ತು.
ಈ ಘಟನೆಯಲ್ಲಿ ಸಿಧು ಮೂಸೆ ವಾಲಾ ಜೊತೆಯಿದ್ದ ಇಬ್ಬರೂ ಗಾಯಗೊಂಡಿದ್ದಾರೆ.
ಶುಭದೀಪ್ ಸಿಂಗ್ ಸಿಧು ಅವರು ಸಿಧು ಮೂಸೆ ವಾಲಾ ಎಂದೇ ಖ್ಯಾತಿ ಗಳಿಸಿದ್ದಾರೆ. ಗಾಯಕ ಮೂಸೆ ಹಾಗೂ ಅವರ ಇಬ್ಬರು ಸ್ನೇಹಿತರು ಪಂಜಾಬ್ನ ಮನ್ಸಾ ಜಿಲ್ಲೆಯ ತಮ್ಮ ಹಳ್ಳಿಗೆ ವಾಹನದಲ್ಲಿ ಹೋಗುವಾಗ ಈ ದಾಳಿ ನಡೆದಿದೆ.
ಶೂಟೌಟ್ ಆದ ನಂತರ ಸಿಧು ಮೂಸೆ ಅವರು ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅಧಿಕೃತವಾಗಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. .
gಆಯಕ ಸಿಧು ಮೂಸೆ ಕಳೆದ ವರ್ಷ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 2022 ರ ಪಂಜಾಬ್ ವಿಧಾನಸಭೆಯಲ್ಲಿ ಇವರು ಮನ್ಸಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಆಮ್ ಆದ್ಮಿ ಪಕ್ಷದ ವಿಜಯ್ ಸಿಂಗ್ಲಾ ಅವರ ವಿರುದ್ಧ ಸೋತಿದ್ದರು.