ಪಂಜಾಬ್ ಸಿಎಂ ಭಗವಂತ್ ಮನ್​​ ಮದುವೆ – ಪೋಟೋ ನೋಡಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್ ಅವರು ಇಂದು ಗುರುವಾರ ವೈದ್ಯೆ ಡಾ.ಗುರ್ ಪ್ರೀತ್ ಕೌರ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

48 ವರ್ಷದ ಭಗವಂತ್ ಸಿಂಗ್ ಮನ್ ಅವರು 28 ವರ್ಷದ ಗುರ್ ಪ್ರೀತ್ ಕೌರ್ ಅವರನ್ನು 2 ನೇ ವಿವಾಹವಾಗಿದ್ದಾರೆ. ಈ ವಿವಾಹದಲ್ಲಿ ಕುಟುಂಬ ಮತ್ತು ಆತ್ಮೀಯ ಗೆಳೆಯರು ಮಾತ್ರ ಭಾಗಿಯಾಗಲಿದ್ದರು.. ಎಎಪಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮದುವೆಯಲ್ಲಿ ಭಾಗಿಯಾಗಿದ್ದರು.

ಸಿಎಂ ಭಗವಂತ್ ಸಿಂಗ್ ಮನ್ ಅವರು ತಮ್ಮ ಈ ಹಿಂದಿನ ಪತ್ನಿ ಗುರು ಪ್ರೀತ್ ಕೌರ್​ ಅವರಿಗೆ 6 ವರ್ಷಗಳ ಹಿಂದೆ ವಿಚ್ಚೇದನ ನೀಡಿದ್ದರು. ಈಗ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ.

ಕಳೆದ ಪಂಜಾಬ್​ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ಭರ್ಜರಿ ಜಯಗಳಿಸಿತ್ತು. ಮೊದಲೇ ಘೋಷಿಸಿದಂತೆ ಭಗವಂತ್ ಸಿಂಗ್ ಮನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಈಗ ಭಗವಂತ್ ಸಿಂಗ್ ಮನ್ ರನ್ನು ಕೈಹಿಡಿದಿರುವ ವಧು ಗುರ್ ಪ್ರೀತ್ ಕೌರ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here