ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ 11ನೇ ದಿನ ಆಗಿರುವ ಹಿನ್ನೆಲೆಯಲ್ಲಿ ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕಾವೇರಿ ನದಿಯಲ್ಲಿ ತರ್ಪಣ ಅರ್ಪಿಸಿದರು.
ಶ್ರೀರಂಗಪಟ್ಟಣದ ಗಂಜಾA ಬಳಿ ಇರುವ ಸಂಗಮದಲ್ಲಿ ವೈದಿಕ ವಿಧಿವಿಧಾನಗಳ ಮೂಲಕ ಅಪರ ಕ್ರಿಯೆಗಳನ್ನು ನಡೆಸಿದರು. ಅಶ್ಲೇಷ ಬಲಿ ಮತ್ತು ನಾರಾಯಣ ಬಲಿ ಪೂಜೆಯನ್ನೂ ನೆರೆವೇರಿಸಿದರು. ಈ ವೇಳೆ ಲೀಲಾವತಿ ಅವರು ಕೂಡಾ ಮಗ ವಿನೋದ್ ರಾಜ್ ಜೊತೆಗಿದ್ದರು.