ADVERTISEMENT
ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಕೊನೆಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಕರ್ನಾಟಕ ಗೂಂಡಾ ಕಾಯ್ದೆಯಡಿ ಬೆಂಗಳೂರಿನ ಅಪರಾಧ ಪತ್ತೆ ದಳ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಿ ಬಂಧಿಸಿದೆ.
ಒಂದು ವರ್ಷ ಜಾಮೀನಿಲ್ಲ:
ಕರ್ನಾಟಕ ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗುವ ಆರೋಪಿಗೆ ಒಂದು ವರ್ಷ ಜಾಮೀನು ಸಿಗಲ್ಲ. ಗೂಂಡಾ ಕಾಯ್ದೆಯಡಿ ಆತನನ್ನು ರೌಡಿಶೀಟರ್ ಆಗಿರುವ ಕಾರಣ ಗಡೀಪಾರು ಮಾಡಬಹುದಾಗಿದೆ.
ಬೆಂಗಳೂರಿನ ಜೆಪಿ ನಗರದ ಏಳನೇ ಹಂತದಲ್ಲಿ ವಾಸವಿರುವ ಪುನೀತ್ ಕೆರೆಹಳ್ಳಿ ರಾಷ್ಟ್ರ ರಕ್ಷಣಾ ವೇದಿಕೆ ಮೂಲಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತಂದು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಿದ್ದು, ಕಳೆದ 10 ವರ್ಷಗಳಲ್ಲಿ ಈತನ ವಿರುದ್ಧ 10 ಪ್ರಕರಣಗಳು ದಾಖಲಾಗಿವೆ.
BJP ಮುಖಂಡನ ಜೊತೆಗೆ ಫೋಟೋ ಬಹಿರಂಗ – BJP ನಾಯಕಿ ಆತ್ಮಹತ್ಯೆ
ಪ್ರಕರಣ 1:
ಮಾರ್ಚ್ 20, 2013ರಲ್ಲಿ ಬೆಂಗಳೂರಿನ ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈತ ಇದೇ ವರ್ಷದ ಜನವರಿ 20ರಂದು ಖುಲಾಸೆಯಾಗಿದ್ದ.
ಪ್ರಕರಣ 2:
2021ರ ಆಗಸ್ಟ್ 28ರಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.
ಪ್ರಕರಣ 3:
2021ರ ಆಗಸ್ಟ್ 11ರಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖಾ ಹಂತದಲ್ಲಿದೆ.
ಪ್ರಕರಣ 4:
2021ರ ಫೆಬ್ರವರಿ 10ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.
ಪ್ರಕರಣ 5:
2022ರ ಜನವರಿ 17ರಂದು ಹಂಪಿ ಪ್ರವಾಸೋದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈತ ದೋಷಿ ಎಂದು ಸಾಬೀತಾಗಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಪ್ರಕರಣ 6:
2022ರ ಮೇ 23ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಳವಳ್ಳಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.
ಪ್ರಕರಣ 7:
2022ರ ಆಗಸ್ಟ್ 15ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,, ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.
ಪ್ರಕರಣ 8:
2022ರ ಡಿಸೆಂಬರ್ 23ರಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಂಗಳೂರಿನ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.
ಪ್ರಕರಣ 9:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮಾರ್ಚ್ 20ರಂದು ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿದೆ.
ಪ್ರಕರಣ 10:
2023ರ ಮಾರ್ಚ್ 31ರಂದು ರಾಮನಗರ ಜಿಲ್ಲೆಯ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲೇ ಅಧಿಕ ಕೃತ್ಯ.
ಈತ ಈ ಹತ್ತೂ ಕೃತ್ಯಗಳನ್ನೂ ಎಸಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ.
ಅದರಲ್ಲೂ ಪೊಲೀಸ್ ಇಲಾಖೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ 2021ರಿಂದ 2023ರ ಮಾರ್ಚ್ವರೆಗೆ ಅಂದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪುನೀತ್ ಕೆರೆಹಳ್ಳಿ ಕೃತ್ಯ ಹೆಚ್ಚಳ ಆಗಿತ್ತು.
2021ರಲ್ಲಿ ಈತನ ವಿರುದ್ಧ ಕೃತ್ಯದ ಮೂರು ಪ್ರಕರಣ, 2022ರಲ್ಲಿ 4 ಮತ್ತು ಈ ವರ್ಷದ ಮಾರ್ಚ್ವರೆಗೆ 2 ಕೃತ್ಯ ಎಸಗಿರುವ ಪ್ರಕರಣ ದಾಖಲಾಗಿದೆ.
32 ವಯಸ್ಸಿಗೆ 10 ಕೇಸ್:
32ನೇ ವಯಸ್ಸಿನಲ್ಲೇ ಪುನೀತ್ ಕೆರೆಹಳ್ಳಿ 10 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಮೊದಲ ಪ್ರಕರಣ ದಾಖಲಾಗಿದ್ದು 22ನೇ ವಯಸ್ಸಿನಲ್ಲಿ. ಮೊದಲ ಪ್ರಕರಣದಲ್ಲಿ ಈತ ಖುಲಾಸೆಗೊಂಡಿದ್ದಾನೆ. ಒಂದು ಪ್ರಕರಣದಲ್ಲಿ ಆರೋಪ ಸಾಬೀತಾಗಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಪುನೀತ್ ಕೆರೆಹಳ್ಳಿ ಎಲ್ಲಿಯವ..?
ಪುನೀತ್ ಕೆರೆಹಳ್ಳಿ ವಾಸವಿರುವುದು ಬೆಂಗಳೂರಿನ ಜೆಪಿ ನಗರದ ಏಳನೇ ಹಂತದಲ್ಲಿ. ಈತನ ವಯಸ್ಸು 32. ಈತ ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಕೆರೆಹಳ್ಳಿ ಗ್ರಾಮದವ. ಬಾಲ್ಯದಿಂದಲೇ ಬೆಂಗಳೂರಲ್ಲೇ ವಾಸವಾಗಿರುವ ಈತನ ತಂದೆ ಹೆಸರು ಪುಟ್ಟಸಿದ್ದಪ್ಪ ಹೆಚ್ ಎಸ್.
ADVERTISEMENT