ADVERTISEMENT
ಪಿಎಸ್ಐ ಆಗಿರುವ ತಂದೆಯಿಂದಲೇ ಪಿಐಎಸ್ ಆಗಿರುವ ಮಗಳು ಅಧಿಕಾರ ಸ್ವೀಕರಿಸಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಇಂಥದ್ದೊಂದು ಅಪರೂಪ ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿದೆ.
ಪಿಎಸ್ಐ ಆಗಿರುವ ವೆಂಕಟೇಶ್ ಅವರು ಮಗಳು ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಪಿಎಸ್ಐ ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ.
2022ರ ಬ್ಯಾಚ್ನಲ್ಲಿ ಪಿಎಸ್ಐ ಆಗಿ ನೇಮಕಗೊಂಡಿರುವ ವರ್ಷಾ ಅವರು ಕಲ್ಬುರ್ಗಿಯಲ್ಲಿ ಒಂದು ವರ್ಷ ಪ್ರೊಬೆಷನರಿ ಅವಧಿ ಮುಗಿಸಿ ಈಗ ಮಂಡ್ಯ ಸೆಂಟ್ರಲ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ನಿವೃತ್ತ ಸೈನಿಕ ವೆಂಕಟೇಶ್:
ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ಮೂಲದ ವೆಂಕಟೇಶ್ ಅವರು 16 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇನಾ ನಿವೃತ್ತಿ ಬಳಿಕ 2010ರಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ದರು. ಒಂದೂವರೆ ವರ್ಷದ ಹಿಂದೆ ಮಂಡ್ಯದ ಸೆಂಟ್ರಲ್ ಠಾಣೆಗೆ ವರ್ಗಾವಣೆಯಾಗಿದ್ದರು.
ADVERTISEMENT