PSI Recruitment Scam : ಬಿಜೆಪಿ ಶಾಸಕನಿಗೆ ಸಚಿವ ಆನಂದ್ ಸಿಂಗ್ ಸಮರ್ಥನೆ

PSI Recruitment Scam

ಪಿಎಸ್​ಐ ನೇಮಕಾತಿ ಹಗರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರ ಆಡಿಯೋ ವೈರಲ್ ಆಗಿದೆ. ಸಚಿವ ಆನಂದ್ ಸಿಂಗ್ ಶಾಸಕರನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದು, ಇದು ವಿರೋಧ ಪಕ್ಷದವರ ಅಪಪ್ರಚಾರ ಎಂದು ಹೇಳಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣಕ್ಕೆ (PSI Recruitment Scam) ಸಂಬಂಧಿಸಿದಂತೆ ವೈರಲ್ ಆದ ಶಾಸಕ ಬಸವರಾಜ ದಡೇಸಗೂರ ಅವರ ಆಡಿಯೋ ಬಗ್ಗೆ ಕೊಪ್ಪಳದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್, ಇದು ವಿರೋಧ ಪಕ್ಷದವರ ಅಪಪ್ರಚಾರ. ಈ ಆಡಿಯೋ ಕೇಳಿಲ್ಲ. ಅವರು ತಪ್ಪು ಮಾಡಿದ್ದರೆ ಇಂದು ಮಾಧ್ಯಮದ ಮುಂದೆ ಬರುತ್ತಿರಲಿಲ್ಲ. ಈ ಬಗ್ಗೆ ತನಿಖೆಯಾಗಲಿ, ತಪ್ಪು ಆಗಿದ್ದರೆ ಕ್ರಮ ವಹಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : PSI ನೇಮಕಾತಿ ಹಗರಣ: BJP ಶಾಸಕರ ಆಡಿಯೋ ಬಹಿರಂಗ

LEAVE A REPLY

Please enter your comment!
Please enter your name here