ರಾಜ್ಯಾದ್ಯಂತ ತೀವ್ರ ಸುದ್ದಿ ಮಾಡಿರುವ ರಾಜಕೀಯ ಪಕ್ಷಗಳ ಪ್ರಮುಖ ಅಸ್ತ್ರವಾಗಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಪಟ್ಟಂತೆ ಕಿಂಗ್ ಪಿನ್ ಆರೋಪಿ ರುದ್ರಗೌಡ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿಯ ಮತ್ತೋರ್ವ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಕೊನೆಗೂ ಸಿಐಡಿ ಪೊಲೀಸರ ಅತಿಥಿಯಾಗಿದ್ದು ಕಳೆದ ತಡರಾತ್ರಿ 3 ಗಂಟೆ ಸುಮಾರಿಗೆ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್ನನ್ನ ಬಂಧಿಸಿ ಕರೆತಂದಿದ್ದಾರೆ. ಮಹಾರಾಷ್ಟ್ರದ ಪುಣೆ ಹೊರವಲಯದಲ್ಲಿದ್ದ ರುದ್ರಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರ, ಕಳೆದ ತಡರಾತ್ರಿ ಪುಣೆ ಹೊರವಲಯದಲ್ಲಿ ಬಂಧನಕ್ಕೀಡಾಗಿರುವ ರುದ್ರಗೌಡನನ್ನು ಇಂದು ನ್ಯಾಯಾಧೀಶರ ಮುಂದೆ ಸಿಐಡಿ ಹಾಜರುಪಡಿಸಲಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಸಿಐಡಿ ಕೋರಲಿದೆ.
ಈ ಮೂಲಕ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದವರಿಗೆ ಆತಂಕ ಎದುರಾಗಿದ್ದು ಪಿಎಸ್ಐ, ಕಾನ್ಸ್ ಟೇಬಲ್, ಎಫ್ ಡಿಎ, ಎಸ್ ಡಿಎ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ಅನುಮಾನ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮೇಲಿದೆ. ನೇಮಕಾತಿ ವಿಭಾಗದಿಂದ ಕೆಳಹಂತದವರೆಗೆ ಪಾಟೀಲ್ ಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.