ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆಮತ್ತೊಬ್ಬ ಪ್ರಮುಖ ಆರೋಪಿ ಗಣಪತಿ ಭಟ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರಕನ್ನಡದ ಶಿರಸಿಯಲ್ಲಿ ಗಣಪತಿ ಭಟ್ ಎಂಬುವವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿ ವಿ.ಭಟ್ ಸಿದ್ಧಾಪುರ ತಾಲೂಕಿನ ಹೆರೂರು ಗ್ರಾಮದವರಾಗಿದ್ದಾರೆ. ಇವರು ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್ಫರ್ ಹಾಗೂ ಇತರೆ ಡೀಲಿಂಗ್ಗಳಲ್ಲಿ ಸಕ್ರಿಯವಾಗಿದ್ದರು ಎನ್ನಲಾಗಿದೆ. ಅಕ್ರಮ ಚಟುವಟಿಕೆಯಿಂದಲೇ ಬಹಳಷ್ಟು ಆಸ್ತಿ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.
ಗಣಪತಿ ಭಟ್ ಅವರನ್ನು ಪೊಲೀಸರು ಶಿರಸಿಯಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಸದ್ಯ ಗಣಪತಿ ಭಟ್ ಅವರನ್ನು ಸಿಐಡಿ ತೀವ್ರ ವಿಚಾರಣೆ ನಡೆಸುತ್ತಿದೆ.
ಗಣಪತಿ ಭಟ್ ಅವರ ಬಂಧನವಾಗುತ್ತಲೇ, ಇವರು ಗೃಹ ಸಚಿವರ ಆಪ್ತ ಕಾರ್ಯದರ್ಶಿ ಎನ್ನಲಾಗಿತ್ತು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಮಾಹಿತಿ ನೀಡಿದ್ದು, ಗಣಪತಿ ಭಟ್ ಎಂಬುವವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಹೆಸರಿನ ವಿಚಾರದಲ್ಲಿ ಕೆಲ ಗೊಂದಲದಲ್ಲಿ ಆಗಿತ್ತು. ನನ್ನ ಕಛೇರಿಯಲ್ಲೂ ಗಣಪತಿ ಭಟ್ ಅಂತ ಇದ್ದಾರೆ. ಹೀಗಾಗಿ ಗೊಂದಲ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಲೆ ದಿನಗಳ ಹಿಂದೆಯಷ್ಟೇ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.