ಕಲಬುರಗಿಯಲ್ಲಿ ನಡೆದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಒಂದೊಂದೇ ವಂಚನೆಗಳು ಬೆಳಕಿಗೆ ಬರುತ್ತಿದ್ದು, ಅಭ್ಯರ್ಥಿಗೆ ಬ್ಲೂಟೂತ್ ಡಿವೈಸ್ ಮೂಲಕ ಅಪರಿಚಿತ ವ್ಯಕ್ತಿ ಉತ್ತರ ಹೇಳುವ ವಿಡಿಯೋ ವೈರಲ್ ಆಗಿದೆ.
ಸಿಐಡಿ ತಂಡ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಇಂಚಿಂಚು ಅಕ್ರಮ ಹೊರಗೆಳೆಯುತ್ತಿದ್ದು, ಇದೀಗ ಪ್ರಕರಣದ ಮತ್ತೊಂದು ಪ್ರಮುಖ ಸಾಕ್ಷಿ ಬಯಲಿಗೆ ಬಂದಿದೆ.
ವ್ಯಕ್ತಿಯೊಬ್ಬ ಅಜ್ಞಾತ ಸ್ಥಳದಲ್ಲಿ ಕೂತು ಬ್ಲೂಟೂತ್ ಡಿವೈಸ್ ಮೂಲಕ ಅಭ್ಯರ್ಥಿಗೆ ಉತ್ತರ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ಸಿಐಡಿ ಅಧಿಕಾರಿಗಳು ಬ್ಲೂಟೂತ್ ಡಿವೈಸ್ ದಂಧೆ ಬಗ್ಗೆ ತೀವ್ರ ತನಿಖೆ ನಡೆಸಿದ್ದಾರೆ.
ಪಿಎಸ್ಐ ಅಕ್ರಮ ಪರೀಕ್ಷೆಯ ಬೆನ್ನತ್ತಿರುವ ಸಿಐಡಿ ಪೊಲೀಸರಿಗೆ ಇತರೆ ರಾಜ್ಯಮಟ್ಟದ ಪರೀಕ್ಷೆಗಳಲ್ಲೂ ಅಕ್ರಮ ನಡೆಸಿರುವ ಸುಳಿವು ದೊರೆತಿದೆ.