ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ಇಂದು ಸಾವಿರಾರು ಜನ ಪ್ರತಿಭಟನಾಕಾರರು ಶ್ರೀಲಂಕಾದ ಅಧ್ಯಕ್ಷರ ಮನೆಗೆ ನುಗ್ಗಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಹಾಕಿದ್ದ ಪೊಲೀಸ್ ಬ್ಯಾರಿಕೇಡ್ಗಳನ್ನು ಮೀರಿ ಅಧ್ಯಕ್ಷರ ಮನೆಗೆ ನುಗ್ಗಲಾಗಿದೆ.
ದೇಶದಲ್ಲಿ ಸೃಷ್ಠಿಯಾಗಿರುವ ಆರ್ಥಿಕ ತುರ್ತು ಪರಿಸ್ಥಿತಿಯಿಂದ 2 ಕೋಟ. 20 ಲಕ್ಷ ಜನ ನಲುಗುತ್ತಿದ್ದಾರೆ.
ಶ್ರೀಲಂಕಾದಲ್ಲಿನ ಇಂದಿನ ಪ್ರಮುಖ ಘಟನಾವಳಿಗಳು :
1) ಇಂಟಲಿಜೆನ್ಸ್ ವರದಿಯ ಆಧಾರದ ಮೇಲೆ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷ ಶುಕ್ರವಾರ ರಾತ್ರಿಯೇ ಸೇನೆಯ ಮುಖ್ಯ ಕಚೇರಿಗೆ ಬಂದಿಳಿದಿದ್ದಾರೆ. ಶನಿವಾರದ ಪ್ರತಿಭಟನೆ ಬೃಹತ್ ಆಗಿ ನಡೆಯಲಿದ್ದು, ಪೊಲೀಸರ ನಿಯಂತ್ರಣ ಕೈತಪ್ಪಲಿದೆ ಎಂದು ಪೊಲೀಸರಿಗೆ ತಿಳಿದಿತ್ತು. ಇಂದು ಶನಿವಾರ ನಡೆಸುವ ಪ್ರತಿಭಟನೆಯನ್ನು ಕಾನೂನುಬಾಹಿರಗೊಳಿಸಬೇಕೆಂದು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಕೋರ್ಟ್ ತಿರಸ್ಕರಿಸಿತ್ತು.
2) ಇಂದು ಬೆಳಿಗ್ಗೆ ಸಾವಿರಾರು ಜನ ಬಸ್, ರೈಲು, ಖಾಸಗಿ ವಾಹನಗಳಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ರಾಜಧಾನಿ ಕೊಲೊಂಬೊಗೆ ಬಂದಿಳಿದಿದ್ದಾರೆ. ಎಲ್ಲರೂ ಬೆಳ್ಳಂಬೆಳಿಗ್ಗೆಯೇ ಅಧ್ಯಕ್ಷರ ಮನೆಯೆ ಮುಂದೆ ನೆರೆದಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಮೀರಿ ಪ್ರತಿಭಟನಾಕಾರರು ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಈ ವೇಳೆ ಹಲವು ಜನ ಪೊಲೀಸ್ ಹಾಗೂ ಸೈನಿಕರು ಪ್ರತಿಭಟನಾಕಾರರಿಗೆ ನೆರವು ನೀಡಿದ್ದಾರೆ.
3) ಪ್ರತಿಭಟನಾಕಾರರು ಅಧ್ಯಕ್ಷರ ಮನೆಯೆ ಮುಂದೆ ಸಮರೋಪಾಧಿಯಲ್ಲಿ ನೆರೆದಿದ್ದರು. ಪೊಲೀಸರು ಗಾಳಿಯಲ್ಲಿ ಗುಡುಂ ಹೊಡೆದು ಜನರನ್ನು ಚದುರಿಸುವ ಪ್ರಯತ್ನ ಮಾಡಿದರು. ಆದಾಗ್ಯೂ, ಪ್ರತಿಭಟನಾಕಾರರು ಪೊಲೀಸರ ಈ ಕ್ರಮಕ್ಕೆ ಹೆದರಲಿಲ್ಲ.
4) ಗೋಟಬಯ ರಾಜಪಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಈಗಾಗಲೇ ಒತ್ತಾಯಿಸಿದ್ದೇವೆ. ಆದರೆ, ಅವರು ತಮ್ಮ ಸ್ಥಾನಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದು ಪ್ರತಿಭಟನಾಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬೇರೆ ಸ್ಥಳಗಳಿಂದ ಕೊಲೊಂಬೊಗೆ ಬರಲು ಮತ್ತಷ್ಟು ಹೆಚ್ಚಿನ ರೈಲು ಓಡಿಸುವಂತೆ ರೈಲ್ವೇ ಇಲಾಖೆ ಮನವಿ ಮಾಡಿಕೊಂಡಿದ್ದರು.
5) ವಿಫಲ ನಾಯಕನನ್ನು ಸ್ಥಾನದಿಂದ ಹೊರ ಕಳಿಸಲು ದೇಶ ಇಷ್ಟು ದೊಡ್ಡ ಮಟ್ಟದಲ್ಲಿ ಒಂದಾಗಿರುವುದನ್ನು ನನ್ನ ಜೀವನದಲ್ಲಿಯೇ ನೋಡಿರಲಿಲ್ಲ. ಎಲ್ಲರೂ ಶಾಂತಿಯಿಂದ ಇರಿ ಎಂದು ಕ್ರಿಕೇಟಿಗ ಸನತ್ ಜಯಸೂರ್ಯ ಟ್ವೀಟ್ ಮಾಡಿದ್ದಾರೆ.
6) ಪೊದುಜಾನ ಪೆರಮುನ (ಎಸ್ಎಲ್ಪಿಪಿ) ಪಕ್ಷದ 16 ಜನ ಸಂಸದರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
7) ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆ ನಂತರ ಅಧ್ಯಕ್ಷರಾಘಿ ಅಧಿಕಾರ ವಹಿಸಿಕೊಳ್ಳಲಿರುವ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಾಜಕೀಯ ಬಿಕ್ಕಟ್ಟಿನ “ಶೀಘ್ರ ಪರಿಹಾರ”ದ ಬಗ್ಗೆ ಚರ್ಚಿಸಲು ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
8) ಶ್ರೀಲಂಕಾ ದೇಶವು ತೀವ್ರ ವಿದೇಶಿ ವಿನಿಮಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ, ದೇಶದಲ್ಲಿ ಆಹಾರ, ಇಂದನ, ಮೆಡಿಸಿನ್ ಮತ್ತಿತರೆ ವಸ್ತುಗಳನ್ನು ಖರೀದಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಆ ಮೂಲಕ ಶ್ರೀಲಂಕಾ ಕಳೆದ ಎಪ್ಪತ್ತು ವರ್ಷಗಳಲ್ಲಿಯೇ ಅತಿ ದೊಡ್ಡ ಆರ್ಥಿಕ ತುರ್ತು ಪರಿಸ್ಥಿತಿಗೆ ಸಿಲುಕಿದೆ.
9) ಡಾಲರ್ ಸಮಸ್ಯೆಯನ್ನು ನೀಗಿಸಲು ಶ್ರೀಲಂಕಾ ಸರ್ಕಾರವು ವಿಶ್ವಸಂಸ್ಥೆಯಿಂದ 3 ಬಿಲಿಯನ್ ಡಾಲರ್ ( 23.78 ಸಾವಿರ ಕೋ.ರೂಪಾಯಿ) ಹಣವನ್ನು ಸಾಲಮನ್ನಾ ಮಾಡಲು ಕೇಳಿಕೊಂಡಿದೆ.
ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರು ಮನೆಯಲ್ಲಿನ ಐಷರಾಮಿ ವಸ್ತುಗಳನ್ನು ಬಳಸಿಕೊಂಡಿದ್ದಾರೆ. ಕಿಚನ್ಗೆ ನುಗ್ಗಿ ರೆಡಿಯಾದ ಊಟ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್ಗೆ ನುಗ್ಗಿ ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.