2 ಲಕ್ಷ ರೂಪಾಯಿವರೆಗೆ ಜೀವ ವಿಮೆ ನೀಡುವ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು 2 ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ನೀಡುವ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯ ಕಂತಿನ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯ ವಾರ್ಷಿಕ ಕಂತಿನ ಮೊತ್ತವನ್ನು 336 ರೂಪಾಯಿಗಳಿಂದ 436 ರೂಪಾಯಿಗೆ ಏರಿಕೆ ಮಾಡಿದೆ.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯ ವಾರ್ಷಿಕ ಕಂತಿನ ಮೊತ್ತವನ್ನು 12 ರೂಪಾಯಿಗಳಿಂದ 20 ರೂಪಾಯಿಗೆ ಹೆಚ್ಚಳ ಮಾಡಿದೆ.
ಪಿಎಂಜೆಜೆಬಿವೈ ಯೋಜನೆಯಡಿ 6.4 ಕೋಟಿ ಚಂದಾದಾರಿದ್ದರೆ, ಪಿಎಂಎಸ್‌ಬಿವೈ ಯೋಜನೆಯಡಿ 22 ಕೋಟಿ ಚಂದಾದಾರಿದ್ದಾರೆ.