ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲೇ ಕೊಲೆಯಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ಘೋಷಿಸಿದ್ದಾರೆ.
ಇದಾದ ಬಳಿಕ ಈಗ 2020ರಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಹಂದಿಗೆ ಹೋಲಿಸಿ ಪ್ರವೀಣ್ ನೆಟ್ಟಾರು ನಿಂದಿಸಿರುವ ಟ್ವೀಟ್ ಈಗ ಮುನ್ನೆಲೆಗೆ ಬಂದಿದೆ.
ಹಂದಿಗೆ ಸ್ನಾನ ಮಾಡಿಸೋದು ಮತ್ತು ಈ @siddaramaiahಎಂಬ ಕ್ರೂರಿಗೆ ಬುದ್ದಿ ಹೇಳೋದು ಎರಡೂ ಒಂದೇ…@nalinkateel ಅವರ ಬಗ್ಗೆ ಮಾತನಾಡುವ ಮೊದಲು ನಿನ್ನ ಯೋಗ್ಯತೆ ಏನು ಅಂಥ ತಿಳ್ಕೊಳ್ಳೋ #ಅಂಡೆಪಿರ್ಕಿ_ಸಿದ್ದರಾಮ