ಇನ್ಮುಂದೆ ರಾತ್ರಿ ಸಮಯದಲ್ಲೂ ಪೋಸ್ಟ್ ಮಾರ್ಟೆಮ್

ಆರೋಗ್ಯವಂತ ವ್ಯಕ್ತಿಗಳು ದುರಾದೃಷ್ಟವಶಾತ್ ಸಾವನ್ನಪ್ಪಿದರೆ, ಅವರ ಅವಯವ ದಾನದಿಂದ ಕನಿಷ್ಠ 8 ರೋಗಿಗಳ ಪ್ರಾಣ  ಕಾಪಾಡಬಹುದು.  ಕಿಡ್ನಿ ಸಮಸ್ಯೆಯಿಂದ  ಬಳಳುತ್ತಿರುವ ಇಬ್ಬರಿಗೆ ಡಯಲಿಸಿಸ್ ನಿಂದ ಮುಕ್ತಿ ಕರುಣಿಸಬಹುದು. ಶ್ವಾಸಕೋಶದಿಂದ  ಇಬ್ಬರಿಗೆ ಶ್ವಾಸ ನೀಡಬಹುದು. ಲಿವರ್ ದಾನದಿನಿಂದ ಇಬ್ಬರನ್ನು ಬದುಕಿಸಬಹುದು. ಕಣ್ಣು, ಹೃದಯದಿಂದ ಇತರರನ್ನು  ಬದುಕಿಸಬಹುದು.

ಆದರೆ, ಮೃತದೇಹಗಳ ಪೋಸ್ಟ್ ಮಾರ್ಟೆಮ್ ವಿಳಂಬದಿಂದ, ಅದರಲ್ಲೂ  ಪ್ರಮುಖವಾಗಿ ಸೂರ್ಯಸ್ತದ ಬಳಿಕ ಪೋಸ್ಟ್ ಮಾರ್ಟೆಮ್ ಗೆ ಅನುಮತಿ  ಇಲ್ಲದ ಕಾರಣ  ಕೆಲವೊಮ್ಮೆ ಅವಯವ ದಾನಕ್ಕೆ  ಅವಕಾಶ  ಸಿಗಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ  ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಅವಯವ ದಾನಕ್ಕೆ ಪ್ರಾಧಾನ್ಯತೆ  ನೀಡಿ ರಾತ್ರಿ ಸಮಯದಲ್ಲೂ  ಪೋಸ್ಟ್ ಮಾರ್ಟೆಮ್ ಮಾಡಲು ಅನುಮತಿ  ನೀಡಿದೆ. ಈ ಆದೇಶ ಸೋಮವಾರದಿಂದಲೇ ಜಾರಿಗೆ  ಬಂದಿದೆ.

ಆದರೆ, ಇದಕ್ಕೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಇರಬೇಕು. ಮುಖ್ಯವಾಗಿ ಭವಿಷ್ಯದಲ್ಲಿ ಯಾವುದೇ ಅನುಮಾನಗಳಿಗೆ ಅವಕಾಶ ಇಲ್ಲದ ರೀತಿಯಲ್ಲಿ ಪೋಸ್ಟ್ ಮಾರ್ಟೆಮ್ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಅದರ ಫೂಟೇಜ್ ಸಂರಕ್ಷಿಸಿ ಇಡಬೇಕು. ಶಾಂತಿ ಭದ್ರತೆಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದರೂ ಪೋಸ್ಟ್ ಮಾರ್ಟೆಮ್ ಅನ್ನು ರಾತ್ರಿ ಸಮಯದಲ್ಲೇ ಮುಗಿಸಬಹುದು.

ಆದರೆ, ಕೊಲೆ ಆತ್ಮಹತ್ಯೆ, ತುಂಬಾ ಹಾಳಾದ ಸ್ಥಿತಿಯಲ್ಲಿ ಪತ್ತೆಯಾದ ಶವಗಳು, ಅನುಮಾನಾಸ್ಪದ ಸಾವುಗಳ ಪ್ರಕರಣಗಳಲ್ಲಿ ರಾತ್ರಿ ಹೊತ್ತು ಪೋಸ್ಟ್ ಮಾರ್ಟೆಮ್ ಮಾಡುವಂತಿಲ್ಲ.

ಬ್ರಿಟಿಷರ ಕಾಲದ ಪದ್ಧತಿಯನ್ನು ರದ್ದು ಮಾಡಿ, ದಿನದ 24 ಗಂಟೆಯೂ ಪೋಸ್ಟ್ ಮಾರ್ಟೆಮ್ ಗೆ ಅವಕಾಶ ನೀಡಲು ತೀರ್ಮಾನ ಮಾಡಲಾಗಿದೆ ಎಂಬ ವಿಚಾರವನ್ನು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಂಡವಿಯಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

.

LEAVE A REPLY

Please enter your comment!
Please enter your name here