ಪ್ರತ್ಯೇಕ ರಾಜ್ಯದ ಕೂಗು, ಪಕ್ಷಾಂತರ ಮತ್ತು ಬೆಳಗಾವಿ ರಾಜಕಾರಣದ ಕತ್ತಿ

Umesh Katti
Umesh Katti
ಕತ್ತಿ ಸಹೋದರರು. ಅಂದರೆ ಉಮೇಶ್​ ಕತ್ತಿ ಮತ್ತು ರಮೇಶ್​ ಕತ್ತಿ. ಬೆಳಗಾವಿ ರಾಜಕಾರಣದಲ್ಲಿ ಪ್ರಭಾವಿ ರಾಜಕೀಯ ಕುಟುಂಬಗಳ ಪೈಕಿ ಕತ್ತಿ ಕುಟುಂಬವೂ ಒಂದು. ಜಾರಕಿಹೊಳಿ ಕುಟುಂಬದ ವಿರುದ್ಧ ರಾಜಕೀಯ ಸೆಣಸು ಕತ್ತಿ ಅವರ ರಾಜಕೀಯ ಗಟ್ಟಿತನಕ್ಕೆ ಮತ್ತೊಂದು ಸಾಕ್ಷಿ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಪದೇ ಪದೇ ಹೇಳಿಕೆಗಳನ್ನು ನೀಡಿ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಮತ್ತು ಪ್ರತ್ಯೇಕ ರಾಜ್ಯದ ಕೂಗನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಉಮೇಶ್​ ಕತ್ತಿ ಕರ್ನಾಟಕ ರಾಜಕೀಯದ ವರ್ಣರಂಜಿತ ರಾಜಕಾರಣಿ ಎಂದರೆ ತಪ್ಪಾಗಲಾರದು.

* 1961 ಮಾರ್ಚ್ 14ರಂದು ನಿಪ್ಪಾಣಿಯಲ್ಲಿ ಜನನ

* ಮಾಜಿ ಶಾಸಕ ವಿಶ್ವನಾಥ್ ಕತ್ತಿಯವರ ಹಿರಿಯ ಪುತ್ರ

* ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು

* ಸಹೋದರ ರಮೇಶ್ ಕತ್ತಿ ಮಾಜಿ ಸಂಸದರು

* ಉಮೇಶ್ ಕತ್ತಿ ಪತ್ನಿ ಶೀಲಾ, ಪುತ್ರ ನಿಖಿಲ್​ ಮತ್ತು ಪುತ್ರಿ ಸ್ನೇಹ ಅವರನ್ನು ಅಗಲಿದ್ದಾರೆ.

* ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನ ನಂತರ ಜನತಾ ಪಕ್ಷದಿಂದ ರಾಜಕೀಯ ಪ್ರವೇಶ
* 1985ರಲ್ಲಿ ಹುಕ್ಕೇರಿ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆ.

* ಒಟ್ಟು 8 ಬಾರಿ ಶಾಸಕರಾಗಿ ಉಮೇಶ್ ಕತ್ತಿ ಆಯ್ಕೆಯಾಗಿದ್ದಾರೆ.

* 1996ರಲ್ಲಿ ಮೊದಲ ಬಾರಿ ಸಕ್ಕರೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾದರು

* 2008ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ.

* 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾಗಿ ಕಾರ್ಯ ನಿರ್ವಹಣೆ

* 2010ರಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಣೆ.

* ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದ ಖ್ಯಾತಿ ಉಮೇಶ್ ಕತ್ತಿ ಅವರದ್ದು.

* ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿ ಸೇವೆ

LEAVE A REPLY

Please enter your comment!
Please enter your name here