ಹಳ್ಳದಲ್ಲಿ ಕೊಚ್ಚಿಹೋದ ಪೊಲೀಸರು : ಒಬ್ಬರ ಶವ ಪತ್ತೆ

Selfie Craze

ಬಂದೋಬಸ್ತ್‌ ಕೆಲಸಕ್ಕಾಗಿ ಗಜೇಂದ್ರಗಡಕ್ಕೆ ಹೋಗಿದ್ದ ಗದಗ ಜಿಲ್ಲೆ ಮುಂಡರಗಿ ಠಾಣೆಯ ಇಬ್ಬರು ಪೊಲೀಸರು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತೊಂಡೆಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಇಂದು ಇದರಲ್ಲಿ ಒಬ್ಬ ಪೊಲೀಸ್ ಕಾನ್​ಸ್ಟೇಬಲ್ ಶವ ಪತ್ತೆಯಾಗಿದೆ.

ಕಾನ್ಸ್‌ಟೇಬಲ್‌ಗಳಾದ ಮಹೇಶ ವಕ್ಕರದ ಮತ್ತು ನಿಂಗಪ್ಪ ಹಲವಾಗಲಿ ನೀರಿನಲ್ಲಿ ಕೊಚ್ಚಿ ಹೋದ ಪೊಲೀಸರು. ಕೊಪ್ಪಳ, ಗದಗ ಜಿಲ್ಲೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂದಲೇ ಅವರಿಗಾಗಿ ಹುಡುಕಾಟ ನಡೆಸಿದ್ದರು. ಮಧ್ಯಾಹ್ನ 2.15ರ ಸುಮಾರಿಗೆ ನಿಂಗಪ್ಪ ಅವರ ಮೃತದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ : ಇಸ್ಪೀಟ್ ಜೂಜಾಟ : ಪೊಲೀಸ್ ಇನ್ಸ್​​ಸ್ಪೆಕ್ಟರ್ ಸೇರಿ ನಾಲ್ವರು ಕಾನ್​ಸ್ಟೇಬಲ್ಸ್​ ಅಮಾನತು

ತೊಂಡಿಹಳ್ಳದ ಬಳಿ ಬಂದೋಬಸ್ತಿಗಾಗಿ ಮುಂಡರಗಿಯಿಂದ ಒಟ್ಟು ಎಂಟು ಜನ ಸಿಬ್ಬಂದಿ ತೆರಳಿದ್ದರು ಎಂದು ತಿಳಿದು ಬಂದಿದೆ.

ಇನ್ನೊಬ್ಬರ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಸುತ್ತಮುತ್ತಲೂ ಇರುವ ಹಳ್ಳಗಳಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ. ಇದನ್ನೂ ಓದಿ : ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ ಪೊಲೀಸರು : ಮಹಾಮಳೆಗೆ ಬಲಿಯಾದವರ ಸಂಖ್ಯೆ 72 ಕ್ಕೆ ಏರಿಕೆ

LEAVE A REPLY

Please enter your comment!
Please enter your name here