ಪ್ರಾತಿನಿಧಿಕ ಚಿತ್ರ:
ಪೊಲೀಸ್ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಎಸ್ಪಿ ಅಥವಾ ಸಿಪಿ ಕಚೇರಿಗೆ ಹೋಗಬೇಕಾಗಿಲ್ಲ ಎಂದು ಕರ್ನಾಟಕ ಪೊಲೀಸ್ ಇಲಾಖೆ ಮುಖ್ಯಸ್ಥರಾದ ಡಿಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.
ಆನ್ಲೈನ್ನಲ್ಲಿ ದಾಖಲೆಗಳನ್ನು ಸಲ್ಲಿಸಿ, ಶುಲ್ಕ ಪಾವತಿಸಿ ಪೊಲೀಸ್ ದೃಢೀಕರಣ ಪತ್ರವನ್ನು ಪಡೆದುಕೊಳ್ಳಬಹುದು ಎಂದು ಅವರು ಟ್ವೀಟಿಸಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯ ವೆಬ್ಸೈಟ್ ಅಥವಾ ಸೇವಾಸಿಂಧು ಮೂಲಕ ಪೊಲೀಸ್ ದೃಢೀಕರಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲಿ ಕೆಟಗರಿ ಆಯ್ಕೆ ಮಾಡಿಕೊಳ್ಳಿ, ಆಧಾರ್ ದೃಢೀಕರಣವನ್ನು ಮಾಡಿದ ಬಳಿಕ ಆನ್ಲೈನ್ ಮೂಲಕವೇ ದಾಖಲೆಗಳನ್ನು ಅಪ್ಲೋಡ್ ಮಾಡಿ ಶುಲ್ಕವನ್ನು ಪಾವತಿಸಿ.
ಬಳಿಕ ಪೊಲೀಸ್ ದೃಢೀಕರಣಕ್ಕಾಗಿ ಠಾಣೆಗೆ ಕರೆಯಬಹುದು. ಪೊಲೀಸ್ ದೃಢೀಕರಣ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಡಿಜಿಪಿ ಅವರು ಟ್ವೀಟಿಸಿದ್ದಾರೆ.
Upload all documents
Pay fee online
You may be called physically once to the police station for verification
You will receive your certificate via email / download— DGP KARNATAKA (@DgpKarnataka) July 30, 2022