ADVERTISEMENT
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನ ಹೆಸರು ಥಳಕು ಹಾಕಿಕೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇದೀಗ ಹಾಸ್ಯ ನಟ ಚಿಕ್ಕಣ್ಣಗೆ ನೋಟೀಸ್ ನೀಡಿದ್ದಾರೆ.
ನಾಳೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನಟ ಚಿಕ್ಕಣ್ಣಗೆ ನೋಟೀಸ್ ನೀಡಿದ್ದಾರೆ.
ಆರ್ ಆರ್ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ಚಿಕ್ಕಣ್ಣ, ನಟ ದರ್ಶನ್ ಆಪ್ತ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ರೇಣುಕಾಸ್ವಾಮಿ ಕೊಲೆಯ ಮುನ್ನ ಸ್ಟೋನಿ ಬ್ರೂಕ್ ಪಬ್ ನಲ್ಲಿ ಪಾರ್ಟಿ ಮಾಡ್ತಿದ್ದ ದರ್ಶನ್ ಜೊತೆ ನಟ ಚಿಕ್ಕಣ್ಣ ಕೂಡ ಇದ್ದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿದೆ.
ಪಾರ್ಟಿ ಮಾಡುತ್ತಿದ್ದ ವೇಳೆ ದರ್ಶನ್ ಸಹಚರರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಪಟ್ಟಣಗೆರೆಯ ಶೆಡ್ ನಲ್ಲಿ ಇರಿಸಿದ್ದೇವೆ ಅಂತ ಕರೆ ಮಾಡಿದ್ದರು. ಈ ಮಾಹಿತಿ ತಿಳಿದ ಕೂಡಲೇ ದರ್ಶನ್ ಪಾರ್ಟಿಯಿಂದ ನೇರವಾಗಿ ಪಟ್ಟಣಗೆರೆಯ ಶೆಡ್ ಗೆ ಬಂದ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ.
ಇನ್ನು ಪಾರ್ಟಿ ಮಾಡುವ ವೇಳೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಮತ್ತು ವಿನಯ್ ಜೊತೆಗೇ ಇದ್ದ ಚಿಕ್ಕಣ್ಣಗೂ ಕೂಡ ಕೊಲೆಯ ಕುರಿತಾಗಿ ಮಾಹಿತಿ ಇತ್ತಾ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ ನಾಳೆ ಚಿಕ್ಕಣ್ಣ ಪೊಲೀಸರೆದುರು ಹೇಳಿಕೆ ನೀಡಲಿದ್ದಾರೆ.
ADVERTISEMENT