ಒಂದೇ ಒಂದು ಸಲ ಈ ಪೊಲೀಸ್‌ ಅಧಿಕಾರಿಯ ಮಾತು ಕೇಳಿ..! – ನಿಮಗೇ ಅನಿಸುತ್ತೆ..!

ಒಂದ್ಕಡೆ ಹೈದ್ರಾಬಾದ್‌ನಲ್ಲಿ ಅತ್ಯಾಚಾರದ ಆರೋಪಿಗಳನ್ನು ಎನ್‌ಕೌಂಟರ್‌ ಮೂಲಕ ಸಾಯಿಸಿರುವುದಕ್ಕೆ ಬೆಂಬಲದ ಮಹಾಪೂರವೇ ವ್ಯಕ್ತವಾಗುತ್ತಿದ್ದರೆ ಇತ್ತ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ಕೊಟ್ಟಿರುವ ಉತ್ತರದ ವೀಡಿಯೋ ಸಿಕ್ಕಾಪಟ್ಟೇ ವೈರಲ್‌ ಆಗುತ್ತಿದೆ.

ಬಿಹಾರ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕ್ರಿಮಿನಲ್‌ ಕೃತ್ಯಗಳ ಬಗ್ಗೆ ಪತ್ರಕರ್ತರೊಬ್ಬರು ಡಿಜಿಪಿ ಗುಪ್ತೇಶ್ವರ್‌ ಪಾಂಡೆಯವರಿಗೆ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಯಿಂದ ಕುಪಿತರಾದಂತೆ ಕಂಡುಬಂದ ಆ ಐಪಿಎಸ್‌ ಅಧಿಕಾರಿ ಆಡಿರುವ ಮಾತು ಎಲ್ಲರೂ ಪ್ರಶಂಸೆ ವ್ಯಕ್ತವಾಗಿದೆ.

ಜಾತಿ ಹೆಸರಲ್ಲಿ, ರಾಜಕೀಯ ಪಕ್ಷದ ಹೆಸರಲ್ಲಿ ಅಪರಾಧಿಗಳನ್ನು ಬೆಂಬಲಿಸುತ್ತೀರಿ. ಅವರನ್ನು ಹೀರೋಗಳನ್ನಾಗಿ ಮಾಡುತ್ತೀರಿ. ಅವರನ್ನು ಪೂಜೆ ಮಾಡುತ್ತೀರಿ, ಅವರಿಗೆ ಮಾಲೆ ಹಾಕಿ ಸನ್ಮಾನ ಮಾಡುತ್ತೀರಿ. ಮತ್ತೆ ಅಪರಾಧಗಳನ್ನು ತಡೆಯುವ ಬಗ್ಗೆ ಮಾತಾಡುತ್ತೀರಿ. ಕೇವಲ ಪೊಲೀಸರಿಂದಷ್ಟೇ ಅಪರಾಧ ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಡಿಜಿಪಿ ಗುಪ್ತೇಶ್ವರ್‌ ಪಾಂಡೆ ಪತ್ರಕರ್ತರ ಪ್ರಶ್ನೆಗೆ ಖಡಕ್‌ ಉತ್ತರ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here