ಆಟೋ ಚಾಲಕನಿಗೆ ಥಳಿಸಿದ ಪೊಲೀಸ್​ ಕಾನ್ಸ್​ಸ್ಟೇಬಲ್​ ಅಮಾನತು

ಆಟೋ ಚಾಲಕನಿಗೆ ಥಳಿಸಿದ ಪೊಲೀಸ್​ ಕಾನ್ಸ್​ಸ್ಟೇಬಲ್​ ಅಮಾನತುಗೊಂಡಿದ್ದಾರೆ. 
30/05/2023ರ ಬೆಳಿಗ್ಗೆ 11:45ರ ಸುಮಾರಿಗೆ ಮಂಡ್ಯ ಸರಕಾರಿ ಆಸ್ಪತ್ರೆಯ ಮುಂದೆ ಹೋಗುವಾಗ ಪೋಲಿಸ್ ಒಬ್ಬ ಆಟೋ ಡ್ರೈವರ್‌ಗೆ ಸಾರ್‍ವಜನಿಕವಾಗಿ ಎಲ್ಲರ ಮುಂದೆ ಹೊಡೆಯುತ್ತಾ ಇದ್ದ, ಏನೇ ತಪ್ಪಾಗಿದ್ದರು ಈ ರೀತಿಯಲ್ಲಿ ಹೊಡೆಯಬಹುದಾ? ಪೋಲೀಸರ ಕೆಲಸ ಕೇಸ್ ಮಾಡಿ ಶಕ್ಷೆ ಕೊಡಿಸೋದ ಇಲ್ಲವೇ ಇವರೇ ಶಿಕ್ಷೆ ಕೊಡೋದಾ..?
ಎಂದು ಟ್ವಿಟ್ಟರ್​ನಲ್ಲಿ ವೀಡಿಯೋ ಹಾಕಿ ಪ್ರಶ್ನಿಸಲಾಗಿತ್ತು.
ಈ ವೀಡಿಯೋ ದೂರಿಗೆ ಪ್ರತಿಕ್ರಿಯಿಸಿರುವ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ ಕುಮಾರ್​ ಅವರು 
ಆ ಕಾನ್​ಸ್ಟೇಬಲ್​ನ್ನು ಅಮಾನತು ಮಾಡಲಾಗಿದೆ ಮತ್ತು ಇಲಾಖಾ ತನಿಖೆ ಆರಂಭಿಸಲಾಗಿದೆ. ಇಂತಹ ಯಾವುದೇ ವರ್ತನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ವಿನಮ್ರತೆ ಪೊಲೀಸರಿಂದ ಸಾರ್ವಜನಿಕರು ಬಯಸುತ್ತಾರೆ
ಎಂದು ಟ್ವೀಟಿಸಿದ್ದಾರೆ.