ಪ್ರಧಾನಿ ಮೋದಿಗೆ ಇಷ್ಟವಾಗುವ 8 ಯೋಗಾಸನಗಳು ಇವಂತೆ..!

ಇವತ್ತು ಅಂತಾರಾಷ್ಟ್ರೀಯ ಯೋಗ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟವಾಗುವ 8 ಯೋಗಾಸನಗಳನ್ನು ಕಾಂಗ್ರೆಸ್​ ಪಟ್ಟಿ ಮಾಡಿದೆ.

ಪ್ರಧಾನಿ ಮೋದಿಯವರಿಗೆ ಇಷ್ಟವಾಗುವ 8 ಆಸನಗಳು, ಕಾಂಗ್ರೆಸ್​ ಪ್ರಕಾರ:

1. ಮೌನಾಸನ – ಪ್ರತಿಕಾಗೋಷ್ಠಿ ನಡೆಸದೇ ಇರುವುದು

2. ಜುಮ್ಲಾಸನ – ಸುಳ್ಳು ಭರವಸೆಗಳನ್ನು ನೀಡುವುದು

3. ಕ್ಯಾಮರಾಸನ – ಕ್ಯಾಮರಾಗಳಿಗೆ ಪೋಸ್​ ಕೊಡುವುದು

4. ಪ್ರಚಾರಾಸನ – ಟಿವಿ, ಪತ್ರಿಕೆಗಳಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವುದು

5. ಅನುಶಾಸನಾಸನ – ದಬ್ಬಾಳಿಕೆಗಳು ನಡೆದಾಗ ಸುಮ್ಮನಿರುವುದು

6. ಮೋರಾಸನ – ನವಿಲಿಗೆ ಕಾಳು ತಿನ್ನಿಸುವುದು

7. ವಸ್ತ್ರಾಸನ – ಬಗೆ-ಬಗೆಯ ಭಿನ್ನಭಿನ್ನವಾದ ಉಡುಪುಗಳನ್ನು ಧರಿಸುವುದು

8. ಮಿತ್ರಾಸನ – ಮಿತ್ರ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವುದು