ಕಿಸಾನ್​ ಸಮ್ಮಾನ್​ ನಿಧಿ: ಇ-KYCಗೆ ಜೂನ್​ 30 ಕಡೆಯ ದಿನ – ಇಲ್ಲಂದ್ರೆ ದುಡ್ಡು ಸಿಗಲ್ಲ

ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿಯಡಿಯಲ್ಲಿ ಇ-ಕೆವೈಸಿ (ಆನ್​ಲೈನ್​ ಮೂಲಕ ಮಾಹಿತಿಗಳನ್ನು ಅಪ್​ಡೇಟ್​ ಮಾಡಿಕೊಳ್ಳುವುದು) ಮಾಡಿಸಿಕೊಳ್ಳಲು ಇದೇ ತಿಂಗಳ 30 ಕಡೆಯ ದಿನ.

ಜೂನ್​ 30ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಅಂತರ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರೂಪಾಯಿ ಜಮೆ ಆಗಲ್ಲ.

ಆಧಾರ್​ ಸಂಖ್ಯೆ ಮತ್ತು ಆಧಾರ್​ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್​ ನಂಬರ್​ ಬಳಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್​, ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಲ್​ ಅಥವಾ ಮೊಬೈಲ್​ ನಂಬರ್​​ಗೆ ಬರುವ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು.

ಅಂಚೆ ಕಚೇರಿಗೆ ತೆರಳಿ ಅಂಚೆ ಉಳಿತಾಯ ಖಾತೆ ತೆರೆಯುವ ಮೂಲಕವೂ ಕಿಸಾನ್​ ಸಮ್ಮಾನ್​ ನಿಧಿಗೆ ಇ-ಕೆವೈಸಿ ಮಾಡಿಸಬಹುದು.

ಗೂಗಲ್​ ಪ್ಲೇ ಸ್ಟೋರ್​ನಿಂದ PM Kisan App ಡೌನ್​ಲೋಡ್​ ಮಾಡಿಕೊಂಡು ಫಲಾನುಭವಿಗಳು ತಮ್ಮ ಮುಖ ಚಹರೆ ತೋರಿಸುವ ಮೂಲಕವೂ ಇ-ಕೆವೈಸಿ ಮಾಡಿಸಿಕೊಳ್ಳಬಹುದು.