ಕೋವಿಡ್ನಿಂದ ತಮ್ಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳು ತಮಗೆ 23 ವರ್ಷ ತುಂಬುವ ವೇಳೆ 10 ಲಕ್ಷ ರೂಪಾಯಿ ನೆರವು ಪಡೆಯುವ ಮಕ್ಕಳಿಗಾಗಿ ಪಿಎಂ ಕಾಳಜಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ಚಾಲನೆ ನೀಡಿದರು.
ಶಾಲಾ ಹಂತದಲ್ಲಿ 20 ಸಾವಿರ ರೂಪಾಯಿ ವಿದ್ಯಾರ್ಥಿವೇತನ ಮತ್ತು ಪ್ರತಿ ತಿಂಗಳು ಅಗತ್ಯ ಖರ್ಚಿಗಾಗಿ 4 ಸಾವಿರ ರೂಪಾಯಿ ಆ ಮಕ್ಕಳು ಪಡೆಯಲಿದ್ದಾರೆ.
2020ರ ಮಾರ್ಚ್ 11ರಿಂದ ಈ ವರ್ಷದ ಫೆಬ್ರವರಿ 28ರವರೆಗೆ ಕೋವಿಡ್ನಿಂದ ತಮ್ಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳಿಗೆ ಈ ಯೋಜನೆಯ ಲಾಭ ಸಿಗಲಿದೆ.